ಕೋಮು ಸಾಮರಸ್ಯಕ್ಕೆ ಸಾಕ್ಷಿಯಾದ ಕೊಣಾಜೆ, ಉಳ್ಳಾಲ ಜನತೆ
ಮಂಗಳೂರು : ಕೋಮುಸೂಕ್ಷ್ಮ ಪ್ರದೇಶವೆಂದೇ ಗುರುತಿಸಲ್ಪಟ್ಟಿರುವ ಕೊಣಾಜೆ, ಉಳ್ಳಾಲ ಪರಿಸರದಲ್ಲಿ ಗಣೇಶೋತ್ಸವ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡ ಮುಸ್ಮಿಮರು ಸಿಹಿ ತಿಂಡಿ, ತಂಪು ಪಾನೀಯ ವಿತರಿಸಿ ಕೋಮುಸೌಹಾರ್ದತೆ ಮೆರೆದಿದ್ದಾರೆ.
ಮುಡಿಪು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ 40ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಶೋಭಾ ಯಾತ್ರೆಗೆ ಇಲ್ಲಿನ ಮುಸ್ಲಿಂ ಯುವಕರು ಸಿಹಿ ತಿಂಡಿ, ತಂಪು ಪಾನೀಯಗಳನ್ನು ವಿತರಿಸಿದರು.
ಗಣಪತಿ ಮೂರ್ತಿ ವಿಸರ್ಜನೆಯ ಶೋಭಾಯಾತ್ರೆ ಸಂದರ್ಭದಲ್ಲಿ ಒಂದೆಡೆ ಭಜನೆ ಸಾಗುತ್ತಿದ್ದರೆ, ಇನ್ನೊಂದೆಡೆ ಸಾಲಾಗಿ ಸ್ತಬ್ಧ ಚಿತ್ರಗಳು ಸಾಗುತ್ತಿದವು. ನೂರಾರು ಭಕ್ತರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ದಣಿವಾದ ಭಕ್ತರಿಗೆ ಮುಡಿಪು ಮುಸ್ಲಿಂ ಯುವಕರ ಸಂಘದ ವತಿಯಿಂದ ಜಂಕ್ಷನಿನಲ್ಲಿ ತಂಪು ಪಾನೀಯಗಳನ್ನು ವಿತರಿಸಿ ಹಬ್ಬದ ಶುಭಾಶಯ ಕೋರಿದರು.
“ಗಣೇಶೋತ್ಸವ ಹಬ್ಬದ ಮೂಲಕ ಸೌಹಾರ್ದತೆ ಗಟ್ಟಿಗೊಳ್ಳಬೇಕು ಎನ್ನುವ ಆಶಯದಿಂದ ನಾವೂ ಕೂಡಾ ಇದರಲ್ಲಿ ಪಾಲ್ಗೊಂಡಿದ್ದೇವೆ. ಪ್ರತೀ ವರ್ಷವೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಉದ್ದೇಶ ಹೊಂದಿದ್ದೇವೆ. ಈ ಕಾರ್ಯಕ್ರಮದ ಮೂಲಕ ಹಿಂದೂ ಮುಸ್ಲಿಂರಲ್ಲಿ ಐಕ್ಯತೆ, ಪ್ರೀತಿ, ಸೌಹಾರ್ದತೆ ಮೂಡಲಿ” ಎಂದು ಬಾಳೆಪುಣಿ ಗ್ರಾಮ ಪಂಚಾಯತ್ ಸದಸ್ಯ ಬಶೀರ್ ಹೇಳಿದರು.
loading...
No comments