ಮುರಾರ್ಜಿದೇಸಾಯಿ ಶಾಲೆಯಲ್ಲಿ ವಿದ್ಯಾರ್ಥಿ ನಾಪತ್ತೆ
ಕಲಬುರಗಿ : ಮುರಾರ್ಜಿ ಶಾಲೆಗೆ ಹೋದ 10ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿ ಬಹಿರ್ದೆಸೆಗೆಂದು ಹೊರೆಗೆ ಹೋಗಿದ್ದು, ಮತ್ತೆ ಮರಳಿ ಶಾಲೆಗೆ ಬಂದಿಲ್ಲ. ನಾಪತ್ತೆಯಾದ ವಿದ್ಯಾರ್ಥಿಯನ್ನು ಹುಡುಕಿಕೊಡಿ ಎಂದು ವಿದ್ಯಾರ್ಥಿಯ ಸೋದರ ಮಾವ ಮಹಿಬೂಬ ಇನಾಮದಾರ ಮನವಿ ಮಾಡಿದರು.
ಜೇವರ್ಗಿ ಪಟ್ಟಣದ ಟಿಪ್ಪು ಸುಲ್ತಾನ ಚೌಕ್ ಬಡಳಿಯ ನಿವಾಸಿ ಮೊಮ್ಮದ ಇಸ್ಮಾಯಿಲ್ ತಂದೆ ಮಹೆಬೂಬ ಇನಾಮದಾರ(16) ನಾಪತ್ತೆಯಾದ ವಿದ್ಯಾರ್ಥಿಯಾಗಿದ್ದಾನೆ. ಮುರಾರ್ಜಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದು, ಆ. 8 ರಂದು ವಸತಿ ಶಾಲೆಗೆ ಹೋಗಿದ್ದಾನೆ. ವಸತಿ ನಿಲಯದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಇಸ್ಮಾಯಿಲ್ ಬಂದು ಹೋಗಿರುವದು ದೃಶ್ಯ ರಿಕಾರ್ಡ್ ಆಗಿದೆ. ನಾಪತ್ತೆಯಾಗಿ ಮೂರು ದಿನವಾದರು ವಸತಿ ನಿಲಯದ ಮುಖ್ಯಸ್ಥರಾಗಲು ಅಥವಾ ಸಂಬಂಧ ಪಟ್ಟವರಾಗಲು ಮನೆಯವರಿಗೆ ಸುದ್ದಿ ಮುಟ್ಟಿಸಿಲ್ಲ. ನಾಪತ್ತೆಯ ಬಾಲಕನ ತಾಯಿ ತನ್ನ ಮಗನ ಕುರಿತು ವಿಚಾರಿಸಿದಾಗ ನಾಪತ್ತೆಯಾಗಿರುವದು ಬೆಳಕಿಗೆ ಬಂದಿದೆ. ಆದರೆ ವಸತಿ ನಿಲಯದ ಹಾಗೂ ಶಾಲೆಯ ಅಧಿಕಾರಿಗಳು ಕೊನೆಯ ಪಕ್ಷ ಪೊಲೀಸರಿಗೆ ಮಾಹಿತಿ ಕೂಡ ನೀಡಿಲ್ಲ ಎಂದು ಪತ್ರಿಕಾ ಭವನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಆರೋಪಿಸಿದರು.
ಎಲ್ಲಾ ಕಡೆ ಹುಡುಕಾಡಿದರು ನಮ್ಮ ಮಗನ ಕುರಿತು ಯಾವುದೆ ಮಾಹಿತಿ ಸಿಕ್ಕಿಲ್ಲ. ವಿದ್ಯಾರ್ಥಿಯ ಕುರಿತು ಯಾರಿಗಾದರು ಮಾಹಿತಿ ಸಿಕ್ಕಲ್ಲಿ ಜೇವರ್ಗಿ ಠಾಣೆಗೆ ಅಥವಾ ಪೊಲೀಸ್ ಕಂಟ್ರೋಲ್ ರೂಂಮಿಗೆ ಮಾಹಿತಿ ನೀಡಬೇಕು ಎಂದು ವಿನಂತಿಸಿದರು.
loading...
No comments