Breaking News

ದೇವಸ್ಥಾನದ ದ್ವನಿವರ್ಧಕ ಕಳುವು ದೇವಾಲಯಕ್ಕೆ ಸೌಂಡ್ ಸಿಸ್ಟಂ ನೀಡಿದ ಮುಸ್ಲಿಮರು


ಭೋಪಾಲ್ : ಮಸೀದಿಯಲ್ಲಿ ಮುಂಜಾನೆ ಕೇಳಿ ಬರುವ ಆಜಾನ್‌ನಿಂದ ತೊಂದರೆಯಾಗುತ್ತಿದೆ ಎಂದು ತಿಂಗಳ ಹಿಂದೆ ಗಾಯಕ ಸೋನು ನಿಗಮ್ ಟ್ವೀಟ್ ಮಾಡಿ ವಿವಾದಕ್ಕೀಡಾಗಿದ್ದರು. ಇತ್ತ ಮಧ್ಯಪ್ರದೇಶದ ಹರ್ದಾ ನಗರದಲ್ಲಿ ಮುಸ್ಲಿಮರು ದೇವಾಲಯವೊಂದಕ್ಕೆ ಸೌಂಡ್ ಸಿಸ್ಟಂ ನೀಡಿ ಸೌಹಾರ್ದತೆ ಮೆರೆದಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ಹರ್ದಾ ನಗರ ಹೊರವಲಯದಲ್ಲಿರುವ ಹನುಮಾನ್ ದೇವಾಲಯವೊಂದರಲ್ಲಿ ಸೌಂಡ್ ಸಿಸ್ಟಂ ಕಳುವಾಗಿತ್ತು. ಹಾಗಾಗಿ ಅಲ್ಲಿನ ಸ್ಥಳೀಯ ಕಾರ್ಪೊರೇಟರ್ ಮತ್ತು ಹರ್ದಾ ಜಿಲ್ಲಾ ವಕ್ಫ್ ಕಮಿಟಿಯ ಅಧ್ಯಕ್ಷ ಸಯೀದ್ ಖಾನ್ ಅವರು ದೇವಾಲಯಕ್ಕೆ ಸೌಂಡ್ ಸಿಸ್ಟಂವೊಂದನ್ನು ನೀಡಲು ತೀರ್ಮಾನಿಸಿದ್ದರು.

ಐದು ದಿನಗಳ ಹಿಂದೆ ದೇವಾಲಯದ ಬಾಗಿಲು ಮರಿದು ಕಳ್ಳರು ಸೌಂಡ್ ಸಿಸ್ಟಂನ್ನು ಕದ್ದುಕೊಂಡು ಹೋಗಿದ್ದರು. ಕೆಲವು ದಿನಗಳ ಹಿಂದೆ ನಾನು ಆ ದೇವಾಲಯದ ದಾರಿಯಾಗಿ ಹಾದು ಹೋಗುವಾಗ ಭಕ್ತಿಗೀತೆಯ ದನಿಯೇ ಕೇಳುತ್ತಿರಲಿಲ್ಲ. ಯಾಕೆ ದೇವಾಲಯದಿಂದ ಭಕ್ತಿಗೀತೆಯೇ ಕೇಳಿ ಬರುತ್ತಿಲ್ಲ ಎಂದು ನಾನು ಅಲ್ಲಿನ ಪೂಜಾರಿಯಲ್ಲಿ ವಿಚಾರಿಸಿದೆ. ಆಗ ಅವರು ಸೌಂಡ್ ಸಿಸ್ಟಂ ಕಳವಾಗಿರುವ ಬಗ್ಗೆ ಹೇಳಿದರು. ಹಾಗಾಗಿ ನಾವು ಹೊಸತೊಂದು ಸೌಂಡ್ ಸಿಸ್ಟಂ ಖರೀದಿಸಿ ನಮ್ಮ ಹಿಂದೂ ಸಹೋದರರಿಗೆ ಉಡುಗೊರೆಯಾಗಿ ಕೊಟ್ಟೆವೆ ಎಂದು ಸಯೀದ್ ಖಾನ್ ಹೇಳಿದ್ದಾರೆ.

ಮಸೀದಿ ಮತ್ತು ದೇವಾಲಯಗಳಲ್ಲಿ ಲೌಡ್ ಸ್ಪೀಕರ್‌ಗಳನ್ನು ಬಳಸುವ ಬಗ್ಗೆ ಕೆಲವರು ತಕರಾರು ಎಬ್ಬಿಸುತ್ತಾರೆ. ಆ ರೀತಿ ಯಾರೂ ಮಾಡಬಾರದು ಎಂದು ನಾನು ಹೇಳಲಿಚ್ಛಿಸುತ್ತೇನೆ ಎಂದಿದ್ದಾರೆ ಖಾನ್. ಕೆಲವು ವಾರಗಳ ಹಿಂದೆಯಷ್ಟೇ ಸತ್ತ ಹಸುವೊಂದನ್ನು ಹೂಳಲು ಯಾರೂ ಮುಂದಾಗದೇ ಇದ್ದಾಗ ಖಾನ್ ಅವರ ನೇತೃತ್ವದಲ್ಲಿ ಮುಸ್ಲಿಮರು ಹಸುವನ್ನು ಹೂತಿದ್ದರು.

loading...

No comments