ಪುಲ್ವಾಮ ದಾಳಿಯಲ್ಲಿ ಹುತಾತ್ಮ ಪತಿಯ ಹಾದಿಯಲ್ಲೇ ನಡೆದು ಸೇನೆಗೆ ಸೇರ್ಪಡೆಗೊಂಡ ಪತ್ನಿ
ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಮೇಜರ್ ವಿಭೂತಿ ಶಂಕರ್ ದೌಂಡಿಯಾಲ್ ಪತ್ನಿ ಸೇನೆ ಸೇರಿ ತಮ್ಮ ಪತಿಯ ಹಾದಿಯಲ್ಲೇ ನಡೆದಿದ್ದಾರೆ.ನಿಖಿತಾ ಕೌಲ್ ಶನಿವಾರ ಸೇನಾ ಸಮವಸ್ತ್ರ ಧರಿಸಿ ಸೇನೆಗೆ ಸೇರ್ಪಡೆಯಾಗಿದ್ದಾರೆ. ತಮಿಳುನಾಡಿನ ಚೆನ್ನೈ ಆಫೀಸರ್ಸ್ ತರಬೇತಿ ಅಕಾಡೆಮಿಯಲ್ಲಿ ಲೆಫ್ಟಿನೆಂಟ್ ಜನರಲ್ ವೈಕೆ ಜೋಶಿ ಆಕೆಯ ಹೆಗಲಿಗೆ ಸ್ಟಾರ್ ನೀಡಿದ್ದಾರೆ.
ಈ ಸಂಬಂಧ ಉಧಂಪುರ ರಕ್ಷಣಾ ಇಲಾಖೆ ಪಿಆರ್ ಒ ಅಧಿಕೃತ ಟ್ವಿಟ್ಟರ್ ನಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೇಜರ್ ದೌಂಡಿಯಾಲ್ ಹುತಾತ್ಮರಾಗಿದ್ದರು. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಅವರಿಗೆ ಶೌರ್ಯ ಚಕ್ರ ನೀಡಲಾಗಿತ್ತು.
ಸೈನಿಕ ಇಲ್ಲ ಎಂದ ಕೂಡಲೇ ಸೇನೆಯೂ ಅವರ ಕುಟುಂಬವನ್ನು ಬಿಟ್ಟುಬಿಡುವುದಿಲ್ಲ, ನಮ್ಮ ಸಹೋದರನ್ನು ಮದುವೆಯಾದ ವೀರನಾರಿ ಈಗ ಸೇನೆಯ ಸಮವಸ್ತ್ರ ಧರಿಸಿ ದೇಶ ಕಾಯಲು ನಿಂತಿದ್ದಾರೆ. ಅವರಿಗೆ ನಮ್ಮ ಬೆಂಬಲ ಮತ್ತು ಪ್ರೋತ್ಸಾಹ ಸದಾ ಇರುತ್ತದೆ ಎಂದು ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.
ಇನ್ನೂ ಅನೇಕರು ಕೌಲ್‌ನನ್ನು ಹೊಗಳಿದ್ದಾರೆ, ಅವರಲ್ಲಿ ಒಬ್ಬರು ಹೀಗೆ ಬರೆದಿದ್ದಾರೆ, ದಿವಂಗತ ಪತಿಗೆ ಎಂತಾ ಗೌರವ. ನಿಜಕ್ಕೂ ಸ್ಪೂರ್ತಿದಾಯಕ ಕಥೆ ಎಂದು ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ.
No comments