ಹಮಾಸ್ ನಾಯಕನ ನೈಜ ಮುಖವಾಡ ಬಯಲು ಮಾಡಿದ ಇಸ್ರೇಲ್
ಇಸ್ರೇಲ್ ಮತ್ತು ಪಾಲೆಸ್ತೀನ್ ಬಿಕ್ಕಟ್ಟಿಗೆ ಕಾರಣವಾದ ಹಮಾಸ್ ಉಗ್ರರ ನಾಯಕರು ಯಾವ ರೀತಿ ಮಕ್ಕಳು ಮುಗ್ಧರನ್ನು ಮುಂದಿರಿಸಿಕೊಂಡು ಹಿಂಸೆಗೆ ಪ್ರೇರೇಪಣೆ ನೀಡುತ್ತಿದೆ ಎಂದು ಈ ಹಿಂದೆ ಇಸ್ರೇಲ್ ಆರೋಪ ಮಾಡಿತ್ತು .ಇದಕ್ಕೆ ಪೂರಕವಾಗುವಂತೆ ಇದೀಗ ಇಸ್ರೇಲ್ ಹಂಚಿಕೊಂಡ ವೀಡಿಯೊದಲ್ಲಿ ಹಮಾಸ್ ನಾಯಕ ಯಾಹ್ಯಾ ಸಿನ್ವರ್ ವೇದಿಕೆಯಲ್ಲಿ ಮಗುವಿನ ಕೈಯಲ್ಲಿ ಬಂದೂಕನ್ನು ಹಿಡಿದು ಕೊಂಡು ಕುಣಿದಿದ್ದಾನೆ .ಅತಿ ಸಣ್ಣ ವಯಸ್ಸಿನಲ್ಲಿ ಈ ರೀತಿಯ ಉಗ್ರವಾದಿ ಕೃತ್ಯಕ್ಕೆ ಪ್ರೇರೇಪಣೆ ನೀಡುವುದು ಬಗ್ಗೆ ಆಕ್ರೋಶ ವ್ಯಕ್ತವಾಗಿದೆ .ಗಾಜಾ ಹಮಾಸ್ ಬಂಡುಕೋರರು ಮುಗ್ಧ ಜನರನ್ನು ಮುಂದಿಟ್ಟು ಹಿಂಸೆ ನಡೆಸುತ್ತಾ ಬಂದಿದ್ದಾರೆ ಎಂದು ಇಸ್ರೇಲ್ ಆರೋಪ ಮಾಡಿದೆ.
No comments