Breaking News

ಬಿಜೆಪಿಯಲ್ಲಿ ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ಎರಡೂ ದುರ್ಬಲ :ಸಿದ್ದರಾಮಯ್ಯ

ಬಿಜೆಪಿ ಹೈಕಮಾಂಡ್ ವೀಕ್ ಆಗಿದೆ. ರಾಜ್ಯದಲ್ಲಿ ಮುಖ್ಯಮಂತ್ರಿಯೂ ದುರ್ಬಲರಾಗಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.ಬೆಂಗಳೂರಿನ ತಮ್ಮ ನಿವಾಸದಲ್ಲಿ ಗುರುವಾರ ಮಾತನಾಡಿದ ಅವರು, ಯಡಿಯೂರಪ್ಪ ಬದಲಾವಣೆ ಚರ್ಚೆ ನಡೆಯುತ್ತಿದೆ. ಇದನ್ನು ನಾನು‌ ಮುಂಚೆಯೇ ಹೇಳಿದ್ದೆ. ಯೋಗೇಶ್ವರ್ ಮೇಲೇಕೆ ಕ್ರಮ ತೆಗೆದುಕೊಳ್ಳಲಿಲ್ಲ. ಯತ್ನಾಳ್ ಮೇಲೆ ಯಾಕೆ ಕ್ರಮ ತೆಗೆದುಕೊಳ್ಳಲಿಲ್ಲ. ಅರುಣ್ ಸಿಂಗ್ ಹೇಳಿದಾಕ್ಷಣ ಅವರು ಯಾರೂ ಸುಮ್ಮನಾಗಲ್ಲ. ಬೆಂಕಿ ಇಲ್ಲದೆ ಯಾವ ಹೊಗೆಯೂ ಆಡಲ್ಲ ಎಂದರು.ನಾಯಕತ್ವ ಬದಲಾವಣೆ ಆಗಬೇಕೆಂದವರ ಮೇಲೆ ಕ್ರಮ ಏಕೆ ತೆಗೆದುಕೊಂಡಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಸಿದ್ದರಾಮಯ್ಯ ಕಿಡಿ ಕಾರಿದರು.

No comments