ಸರಗಳವಿಗೆ ಯತ್ನಿಸಿ ಸಾರ್ವಜನಿಕರ ಕೈಗೆ ಸಿಕ್ಕಿದವರು ರೊಹಿಂಗ್ಯಾಗಳೇ?
ಕೋಲಾರ ಭಾನುವಾರ ನಗರದ ಹಲವಾರು ಬಡಾವಣೆಗಳಲ್ಲಿ ಕೈಯಲ್ಲಿ ಡ್ರ್ಯಾಗನ್ ಹಿಡಿದು ಮಹಿಳೆಯರನ್ನು ಬೆದರಿಸಿ ಸರ ಕಳವು ಮಾಡಿದ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ .ನಗರದ 3ಕಡೆಗಳಲ್ಲಿ ಸರಗಳ್ಳತನ ನಡೆಸಿ ಕುವೆಂಪುನಗರದ ಮಹಿಳೆಗೆ ರಾಜಾರೋಷವಾಗಿ ಡ್ರ್ಯಾಗನ್ ತೋರಿಸಿ ಸರಗಳವಿಗೆ ಯತ್ನಿಸಿದ ವೇಳೆ ದುಷ್ಕರ್ಮಿಗಳನ್ನು ಸಾರ್ವಜನಿಕರು ಅಟ್ಟಾಡಿಸಿ ಕೊಂಡು ಹೊಡೆದಿದ್ದಾರೆ .
ಆ ನಂತರ ಪೋಲಿಸ್ ವಶಕ್ಕೆ ನೀಡಿದ್ದು ಯುವಕರು ಗಾಂಜಾ ನಶೆಯಲ್ಲಿದ್ದಂತೆ ಕಂಡುಬಂದಿದ್ದು ಘಟನೆ ಸಂಬಂಧಿಸಿ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ .ಇನ್ನು ಪೊಲೀಸರು ನಡೆಸಿದ ಪ್ರಾಥಮಿಕ ವಿಚಾರಣೆಯಲ್ಲಿ ಯುವಕರು ಒಮ್ಮೊಮ್ಮೆ ಒಂದೊಂದು ಹೆಸರು ಹೇಳುತ್ತಿದ್ದಾರೆ ಎಂದು ತಿಳಿದುಬಂದಿದೆ .ಇನ್ನು ಈ ಸರಗಳ್ಳರ ವರ್ತನೆ ಗಮನಿಸಿದರೆ ಇವರು ಅಕ್ರಮವಾಗಿ ಬಾಂಗ್ಲಾದಿಂದ ನುಸುಳಿ ಬಂದ ರೋಹಿಂಗ್ಯಾಗಳು ಇರಬಹುದೇ ಎಂದು ಸಾರ್ವಜನಿಕ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ .
No comments