"ಅವ್ಯವಹಾರ "ಬ್ಯಾಂಕ್ ಮ್ಯಾನೇಜರ್ ರಾಘವ ಉಚ್ಚಿಲ್ ಸಹಿತ ಮೂವರ ವಿರುದ್ಧ FIR ದಾಖಲು
ಬ್ಯಾಂಕ್ ಮ್ಯಾನೇಜರ್ ರಾಘವ ಉಚ್ಚಿಲ್ ವಿರುದ್ಧ FIR ದಾಖಲು.ಮಿತಿ ಮೀರುತ್ತಿರುವ ಸಹಕಾರಿ ಸಂಸ್ಥೆಗಳ ಅವ್ಯವಹಾರ.ಕಳೆದೊಂದು ತಿಂಗಳಲ್ಲಿ ಮೂರು ಬ್ಯಾಂಕುಗಳಲ್ಲಿ ಬೆಳಕಿಗೆ ಬಂದ ಭ್ರಷ್ಟಾಚಾರ.
ಈ ಪ್ರಕರಣದ ಸಂಕ್ಷಿಪ್ರ ಸಾರಾಂಶವೆನೆಂದರೆ ಇಂದು ಮಾನ್ಯ ಜೆ.ಎಮ್ಎಫ್ ಸಿ 2 ನೇ ನ್ಯಾಯಾಲಯದಿಂದ ಬಂದ ಖಾಸಗಿ ದೂರಿನ ಅನ್ವಯ ಮಾಧವ ಬಿ.ಎಮ್(A1) ಎಂಬವರು ಭಗವತಿ ಕೋ ಅಪರೇಟಿವ್ ಬ್ಯಾಂಕಿನ ಚೆರ್ ಮ್ಯಾನ್, ಶ್ರೀಮತಿ ಸುಷ್ಮಾ ಎಂಬವರು (A2)ಜನರಲ್ ಮ್ಯಾನೇಜರ್, ರಾಘವ ಉಚ್ಚಿಲ(A3) ಎಂಬವರು ಬ್ರಾಂಚ್ ಮ್ಯಾನೇಜರ್ ಆಗಿದ್ದು, ಆರೋಪಿಗಳೆಲ್ಲರೂ ಸೇರಿ ಭಗವತಿ ಕೋ ಅಪರೇಟಿವ್ ಬ್ಯಾಂಕಿನಲ್ಲಿ , ಬಂಟ್ವಾಳ ಸಾಲೆತ್ತೂರು ನಿವಾಸಿ ವಿಟ್ಟಲ್ ಶೆಟ್ಟಿ ಎಂಬವರು 2010 ನೇ ಇಸವಿಯಲ್ಲಿ ಬಿಸಿ ರೋಡ್ ನ ಭಗವತಿ ಕೋ ಅಪರೇಟಿವ್ ಬ್ಯಾಂಕಿನಲ್ಲಿ , ತನ್ನ ಆಸ್ತಿಯನ್ನು ಅಡಮಾನವಿರಿಸಿ ಸಾಲ ಪಡೆದುಕೊಂಡಿದ್ದು ವಿಟ್ಟಲ್ ಶೆಟ್ಟಿ ಎಂಬವರು ಸಾಲವನ್ನು ಮರುಪಾವತಿಸದೇ ಇದ್ದುದ್ದರಿಂದ ಬ್ಯಾಂಕಿನವರು ವಿಟ್ಟಲ್ ಶೆಟ್ಟಿ ರವರ ಆಸ್ತಿಯನ್ನು ಹರಾಜು ಮೂಲಕ ಮುಟ್ಟುಗೋಲು ಮಾಡಿಕೊಳ್ಳುತ್ತದೆ. 2022 ನೇ ಇಸವಿಯಲ್ಲಿ ಬ್ಯಾಂಕ್ ವಿಟ್ಟಲ್ ಶೆಟ್ಟಿ ಯವರ ಹೆಸರಿನಲಿದ್ದ ಸಾಲವನ್ನು ಮುಕ್ತಾಯಗೊಳಿಸಿರುತ್ತದೆ, ಬಳಿಕ ಆರೋಪಿಗಳು ಬ್ಯಾಂಕಿನ ನಿಯಮಗಳನ್ನು ಉಲ್ಲಂಘಿಸಿ 2024 ರಲ್ಲಿ 25,00,000/- ಲಕ್ಷ ಸಾಲ ಪಡೆದಿರುತ್ತಾರೆ
ದಿನಾಂಕ 03.06.2024 ರಂದು ಆರೋಗ್ಯ ಸಮಸ್ಯೆಯಿಂದ ಅಥೆನಾ ಆಸ್ಪತ್ರೆಯಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ರಿದ್ದು, ವಿಟ್ಟಲ್ ಶೆಟ್ಟಿ ಎಂಬದರು ಬ್ಯಾಂಕಿಗೆ ಹಾಜರಾಗದೇ ಇದ್ದು ಆರೋಪಿಗಳು ವಿಟ್ಟಲ್ ಶೆಟ್ಟಿ ಹೆಸರಿನಲಿ ಇನ್ನೂ 40,00,000/- ಸಾಲವನ್ನು ಮಂಜೂರು ಮಾಡಿರುತ್ತಾರವಿಟ್ಟಲ್ ಶೆಟ್ಟಿ ಎಂಬವರು ದಿನಾಂಕ 09-06-2024 ರಂದು ಅನಾರೋಗ್ಯದ ನಿಮಿತ್ತ ಮೃತಪಟ್ಟಿದ್ದು, ವಿಟ್ಟಲ್ ಶೆಟ್ಟಿ ರವರು ಮೃತಪಟ್ಟ ಮರುದಿನದೇ: ಆರೋಪಿಗಳು ಬ್ಯಾಂಕಿಗೆ. ವಂಚನೆ ಮಾಡುವ ಸಮಾನ ಉದ್ದೇಶದಿಂದ 20,00,000/- ಹಣವನ್ನು ವಿಟ್ಟಲ್ ಶೆಟ್ಟಿ ಹೆಸರಿನಲಿ.. ಬಿಡುಗಡೆ ಮಾಡಿ, ಬ್ಯಾಂಕಿನ ಹಣವನ್ನು ದುರ್ಬಳಕೆ ಮಾಡಿ ಬ್ಯಾಂಕಿಗೆ ಮೋಸ ಹಾಗೂ ವಂಚನೆ ಮಾಡಿರುತ್ತಾರೆ. ಆರೋಪಿಗಳೆಲ್ಲರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಬ್ಯಾಂಕಿನ ಮಾಜಿ ನಿರ್ದೇಶಕರಾದ ಹರೀಶ್ ಕುಮಾರ್ ಎಂಬವರು ಭಾರತೀಯ ನ್ಯಾಯದಂಡ ಸಾಹಿತೆ BNSS U/S 157 Cr.PC provision (a)or (b)/176 ದೂರು ದಾಖಲಿಸಿರುತ್ತಾರೆ.
No comments