ಮೋಟಾರ್ ಶೋ-2016 ನಲ್ಲಿ ಎಲ್ಲರ ಚಿತ್ತ ಈ ಪಿಂಕ್ ‘ಪಿಂಕ್ ಪ್ಯಾಂಥರ್ ನತ್ತ
ಅಮೆರಿಕದ ಲಾಸ್ ಏಂಜೆಲಿಸ್‍ನಲ್ಲಿ ಆರಂಭವಾಗಿರುವ ಮೋಟಾರ್ ಶೋ-2016ರಲ್ಲಿ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾದ ಈ ವಿಶಿಷ್ಟ ವಿನ್ಯಾಸದ ಕಾರಿನ ಹೆಸರು ಪಿಂಕ್ ಪ್ಯಾಂಥರ್. ಈ ಕಾರಿನ ಮೋಡಿಗೆ ಮನ ಸೋಲದವರಿಲ್ಲ. ಏರೋ ಮಾಡೆಲ್ ಕಾರ್‍ನಂತಿರುವ ಇದರೊಳಗೆ ಒಂದು ಮಿನಿ ಬಾರ್ ಮತ್ತು ಇಬ್ಬರು ಸುಖವಾಗಿ ನಿದ್ರಿಸುವ ಮೆತ್ತನೆಯ ಪಲ್ಲಂಗವೂ ಇದೆ. ಹಾಲಿವುಡ್ ಸಿನಿಮಾಗಳಿಗೆ ನವ ಪರಿಕಲ್ಪನೆಯ ಕಾರುಗಳನ್ನು ಪರಿಚಯಿಸಿರುವ ಅಮೆರಿಕದ ವಿನ್ಯಾಸಕ ಜಾರ್ಜ್ ಬಾರಿಸ್ ಈ ಕಾರನ್ನು ವಿಶಿಷ್ಟವಾಗಿ ಅಭಿವೃದ್ಧಿಗೊಳಿಸಿದ್ದಾರೆ. ಐದು ವರ್ಷಗಳ ಪ್ರಾಜೆಕ್ಟ್ ನಂತರ ಗಾಲ್ಪಿನ್ ಆಟೋ ಕಂಪನಿ ಪಿಂಕ್ ಪ್ಯಾಂಥರ್‍ನನ್ನು ಲಾಸ್ ಏಂಜೆಲಿಸ್ ಆಟೋ ಶೋನಲ್ಲಿ ಪ್ರದರ್ಶನಕ್ಕಿಟ್ಟಿದೆ.
ಪ್ಯಾಂಥರ್ ಮೊಬೈಲ್‍ನನ್ನು ಹೋಲುವ ಇದೇ ರೀತಿಯ ಸೂಪರ್ ಕಾರು 1960ರಲ್ಲಿ ದಿ ಪಿಂಕ್ ಪ್ಯಾಂಥರ್ ಅನಿಮೇಷನ್ ಸಿನಿಮಾದಲ್ಲಿ ಗಮನಸೆಳೆದಿತ್ತು. ಈಗ ನಿಜರೂಪವಾಗಿ ಕಾಣಿಸಿಕೊಂಡಿದೆ. ಬ್ಯಾಕ್ ಟು ದಿ ಫ್ಯೂಚರ್ ಮತ್ತು ನೈಟ್ ರೈಡರ್ ಸಿನಿಮಾಗಳಲ್ಲಿ ಪಿಂಕ್ ಪ್ಯಾಂಥರ್ ವೀಕ್ಷಕರನ್ನು ಬಹುವಾಗಿ ಆಕರ್ಷಿಸಿತ್ತು. ನವೆಂಬರ್ 27ರವರೆಗೆ ಪಿಂಕಿಯನ್ನು ಕಾರು ಪ್ರಿಯರು ನೋಡಬಹುದಾಗಿದೆ. ಈ ಕಾರಿನ ಬೆಲೆ ಬಗ್ಗೆ ಸ್ಪಷ್ಟ ಮಾಹಿತಿ ಲಭಿಸಿಲ್ಲ.
No comments