ಪ್ಯಾರಿಸ್ ಮೋಟಾರ್ ಶೋ- 2016ನಲ್ಲಿ ರೆನೌಲ್ಟ್ ಟ್ರೆಜರ್ ಎಲೆಕ್ಟ್ರಿಕ್ ಸ್ಪೋಟ್ರ್ಸ್ ಕಾರು
ಫ್ರಾನ್ಸ್ ನಲ್ಲಿ ನಡೆಯುತ್ತಿರುವ ಪ್ಯಾರಿಸ್ ಮೋಟಾರ್ ಶೋ- 2016ರಲ್ಲಿ ರೆನೌಲ್ಟ್ ಟ್ರೆಜರ್ ಎಲೆಕ್ಟ್ರಿಕ್ ಸ್ಪೋಟ್ರ್ಸ್ ಕಾರು ಎಲ್ಲರ ಆಕರ್ಷಣೀಯ ಕೇಂದ್ರಬಿಂದುವಾಗಿದೆ. ಇದು ಕಾರ್ಬನ್ ಫೈಬರ್ ಕವಚ ಹೊಂದಿದ್ದು, ಇದು ಒಂದು ಭಾಗ ತೆರೆದುಕೊಂಡು ಗಾಢ ಕೆಂಪುವರ್ಣದ ಒಳ ವಿನ್ಯಾಸವನ್ನು ಅನಾವರಣಗೊಳಿಸುತ್ತದೆ. ಈ ಶೋನಲ್ಲಿ 22 ಎಸ್‍ಯುವಿಗಳು, ಹೈಬ್ರಿಡ್ ಕಾರುಗಳು, ಸೂಪರ್ ಕಾರುಗಳು ಮತ್ತು ಹೈಪರ್ ಕಾರುಗಳನ್ನು ಒಂದೇ ಸೂರಿನಡಿ ನೋಡಬಹುದು. ಫೆರಾರಿ, ಮರ್ಸಿಡಿಸ್, ಬಿಎಂಡಬ್ಲ್ಯೂ, ಆಡಿ, ಲ್ಯಾಂಡ್ ರೋವರ್‍ನ ವೈವಿಧ್ಯಮಯ ಹೊಸ ಪರಿಕಲ್ಪನೆಯ ಕಾರುಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.
No comments