Breaking News

ಯುವ ತೇಜಸ್ಸು ಬಳಗಕ್ಕೆ ಮಂಗಳೂರಿನಲ್ಲಿ ಹಿಂದು ಜಾಗರಣ ವೇದಿಕೆಯವರಿಂದ ಗೌರವ ವಂದನೆ ಹಾಗೂ ಧನಸಹಾಯ

ಮಂಗಳೂರು:
ಸಾಮಾಜಿಕ ಜಾಲ ತಾಣಗಳಾದ ವಾಟ್ಸಫ್ ಹಾಗೂ ಫೇಸ್ ಬುಕ್ ಗಳ ಮುಖಾಂತರ ಸಾಮಾಜಿಕ  ಕಾಳಜಿಯೊಂದಿಗೆ ಬಡವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಒಂದು ಸಮಾನ ಮನಸ್ಕ ಯುವಕ ಯುವತಿಯರ ಗುಂಪೊಂದು ಕಾರ್ಯರೂಪಕ್ಕೆ ಬಂದಿತ್ತು.  ಇದೀಗ ದಕ್ಷಿಣಕನ್ನಡ ಹಾಗೂ ಉಡುಪಿ ಪರಿಸರದಲ್ಲಿ ಕಡುಬಡವ ಕುಟುಂಬಗಳಿಗೆ ಧನಸಹಾಯ ಮಾಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿರುತ್ತದೆ.

ಬಡವರಿಗೆ, ವೃದ್ಧರಿಗೆ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಾ ಬಂದಿರುವ ಇಂತಹ ಸಾಮಾಜಿಕ ಕಳಕಳಿ ಇರುವ ಯುವಕರ ತಂಡವನ್ನು ಮಂಗಳೂರಿನ ಪಂಪ್ ವೆಲ್ ಘಟಕದ ಹಿಂದೂ ಜಾಗರಣ ವೇದಿಕೆಯವರು ಗುರುತಿಸಿ ತಾನು ಲೋಕಕಲ್ಯಾಣಾರ್ಥವಾಗಿ ನಡೆಸಿಕೊಂಡು ಬರುತ್ತಿದ್ದ *ಶ್ರೀ ಸತ್ಯನಾರಾಯಣ ದೇವರ ಪೂಜೆಯ ಸಂದರ್ಭ ಯುವ  ತೇಜಸ್ಸು  ಬಳಗವನ್ನು ಗುರುತಿಸಿ, ಸ್ಮರಣಿಕೆ ನೀಡಿ ಹಾಗೂ ಧನಸಹಾಯ ಮಾಡಿ  ಇನ್ನೂ ಹೆಚ್ಚು ಸಾಮಾಜಿಕ  ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ  ಪ್ರೋತ್ಸಾಹಿಸಿದರು.

       ಈ ಶುಭ ಸಂಧರ್ಭ ಶ್ರೀ ಕಟೀಲು ದೇವಳದ ಅನುವಂಶಿಕ ಅರ್ಚಕರಾದ ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣನವರು ಆಶೀರ್ವಚನ ನೀಡಿದರು. "ತುಳುವ ಬೊಳ್ಳಿ" ಎಂದು ಖ್ಯಾತಿ ಪಡೆದ ದಯಾನಂದ ಕತ್ತಲ್ ಸರ್ ರವರು ದಿಕ್ಸೂಚಿ ಭಾಷಣ ಮಾಡಿ ಯುವ ತೇಜಸ್ಸಿನ ಹಾಗೂ ಸೇವಾ ಸಂಸ್ಥೆಗಳ ಕಾರ್ಯವೈಖರಿಯನ್ನು ಬಹಳ ಮಾರ್ಮಿಕವಾಗಿ ಸಭೆಗೆ ತಿಳಿಸಿಕೊಟ್ಟರು. ಶ್ರೀ ಸತೀಶ್ ಕುಮಾರ್ ಜೋಗಿ, ಶುಭಕರ್ ಶೆಟ್ಟಿ, ಎಕ್ಕೂರು ಶ್ರೀ.ಬಿ ಹೇಮಂತ್ ಹಾಗೂ ಶ್ರೀ ನವೀನ್ ಸುವರ್ಣ ಮತ್ತು ಶ್ರೀ ಮನೋಹರ್ ಶೆಟ್ಟಿ ಕದ್ರಿ, ಹಾಗೂ ಹಿಂದೂ ನೇತಾರ ಶ್ರೀ ಸತ್ಯಜೀತ್ ಸುರತ್ಕಲ್ರವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರೂ ಹಾಗೂ ಯುವತೇಜಸ್ಸಿನ ಹಲವು ಸದಸ್ಯರು ಈ  ಒಂದು ಸಭಾಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

No comments