Breaking News

ಅಮೇರಿಕಾ ಮಸೀದಿಗಳಿಗೆ ಟ್ರಂಪ್ ಅಭಿಮಾನಿಗಳಿಂದ ಬೆದರಿಕೆ ಪತ್ರ.


ಕ್ಯಾಲಿಫೋರ್ನಿಯಾ : ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿನ ಮೂರು ಮಸೀದಿಗಳಿಗೆ ಟ್ರಂಪ್ ಅಭಿಮಾನಿಗಳು ಬೆದರಿಕೆ ಪತ್ರಗಳನ್ನು ಬರೆದಿದ್ದಾರೆ. ಬೆದರಿಕೆ ಪತ್ರದಲ್ಲಿ ಮುಸಲ್ಮಾನರು ಕೊಳಕರು, ಜಿಗುಪ್ಸೆ ಹುಟ್ಟೊಸೋರು ಎಂದು ಜರೆಯಲಾಗಿದೆ.
 ಅಮೇರಿಕಾವನ್ನು ಶುದ್ದ ಮಾಡುವ ಕೆಲಸ ಡೊನಾಲ್ಡ್ ಟ್ರಂಪ್ ಮೊದಲಾಗಿ ಮುಸಲ್ಮಾನರಿಂದ ಶುರು ಮಾಡಲಿದ್ದು ಆದಷ್ಟು ಬೇಗ ನಿಮ್ಮ ಗಂಟುಮೂಟೆ ಕಟ್ಟಿ ಹೊರನಡೆಯಿರಿ ಎಂದು ಬರೆದಿದ್ದಾರೆ. ಇಷ್ಟೇ ಅಲ್ಲದೆ ಮುಸಲ್ಮಾನರನ್ನು ಸೇತಾನನ ಮಕ್ಕಳು ಎಂದು ಈ ಪತ್ರಗಳಲ್ಲಿ ಸಂಬೋಧಿಸಲಾಗಿದೆ
ಈ ರೀತಿಯ ಬೆದರಿಕೆ ಪತ್ರಗಳು ಉತ್ತರ ಕ್ಯಾಲಿಫೋರ್ನಿಯದ ಸ್ಯಾನ್‌ ಓಸೆಯಲ್ಲಿನ ಮಸೀದಿ, ಲಾಸ್‌ ಏಂಜಲಿಸ್‌ನ ಲಾಂಗ್‌ ಬೀಚ್‌ ಮತ್ತು ಕ್ಲಾರಾಮಾಂಟ್‌ ಮಸೀದಿಗಳಿಗೆ ಬಂದಿವೆ ಎಂದು ಅಮೆರಿಕನ್‌ ಇಸ್ಲಾಮಿಕ್‌ ರಿಲೇಶನ್ಸ್‌ ಕೌನ್ಸಿಲ್‌ ಹೇಳಿದೆ.
ಬೆದರಿಕೆ ಪತ್ರ ಬಂದಿರುವುದರ ಸಲುವಾಗಿ ಅಮೇರಿಕನ್ ಮುಸ್ಲಿಂ ಸಂಘವು ಮಸೀದಿಗಳ ರಕ್ಷಣೆಗೆ ಪೋಲೀಸ್ ನೆರವು ಕೋರಿದರು.

No comments