"ಆಕ್ರೋಶ್ ದಿವಸ್" ಪ್ರತಿಭಟನೆಗೆ ಹಣ ನೀಡಿ ಜನರ ಕರೆತಂದ ಕಾಂಗ್ರೆಸ್.
ಕರ್ನಾಟಕ : ನವೆಂಬರ್ 8 ರಂದು ನರೇಂದ್ರ ಮೊದಿ ಸರ್ಕಾರ ಕಪ್ಪು ಹಣ, ನಕಲಿ ನೋಟು ಹಾವಳಿ ತಪ್ಪಿಸಲು 500 ಹಾಗೂ 1000 ರೂಪಾಯಿ ಮುಖಬೆಲೆಯ ನೋಟು ನಿಶೇಧ ಮಾಡಿತ್ತು. ಆದರೆ ಇದನ್ನೇ ನೆಪ ಮಾಡಿಕೊಂಡು ರಾಜಕೀಯ ನಡೆಸುತ್ತಿರುವ ವಿಪಕ್ಷಗಳು ಕೇಂದ್ರಸರ್ಕಾರದ ನಿರ್ಧಾರದಿಂದ ಜನ ಸಮಾನ್ಯರಿಗೆ ತೊಂದರೆ ಆಗುತ್ತಿದೆ, ಕೇಂದ್ರಸರ್ಕಾರ ನೋಟು ನಿಶೇಧ ನಿರ್ಧಾರ ವಾಪಾಸ್ ಪಡೆಯಬೇಕು ಎಂದು ಆಗ್ರಹಿಸಿ ಇಂದು (ನವೆಂಬರ್ 28) ನಡೆಸುತ್ತಿರುವ "ಆಕ್ರೋಶ ದಿವಸ್" ಪ್ರತಿಭಟನೆಗೆ ದೇಶದೆಲ್ಲೆಡೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಆದರೆ ಗದಗ ಮತ್ತು ಕೋಲಾರದಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಲು ಹಣ ನೀಡಿ ಜನರನ್ನು ಕರೆದುಕೊಂಡು ಬಂದಿರುವ ಬಗ್ಗೆ ಖಾಸಗಿ ಟಿವಿ ಮಾಧ್ಯಮ ವರದಿ ಮಾಡಿದೆ.ಕಾಂಗ್ರೆಸ್ ಮುಖಂಡರು ಗದಗ ಬೆಟಗೇರಿಯಲ್ಲಿನ ಮನೆ ಮನೆಗೆ ತೆರಳಿ ಹಣ ನೀಡಿ ಪ್ರತಿಭಟನೆಗೆ ಜನರನ್ನು ಕರೆತಂದಿದ್ದಾರೆ, ಹಾಗೆಯೇ ನಿಮಗೆ ಮನೆ ಕೊಡಿಸುತ್ತೇವೆ ಎಂದು ಸುಳ್ಳು ಹೇಳಿ ಹಲವರನ್ನು ಕರೆತರಲಾಗಿದೆ.
ನಮಗೆ ಪ್ರತಿಭಟನೆ ಇದೆ ಎಂದು ಹೇಳಿರಲಿಲ್ಲ, ಸುಳ್ಳು ಹೇಳಿ ಪ್ರತಿಭಟನೆಗೆ ಕರೆತರಲಾಗಿದೆ ಎಂದು ಹಲವು ಮಹಿಳೆಯರು ಕಾಂಗ್ರೆಸ್ ಮುಖಂಡರ ವಿರುದ್ದ ಆಕ್ರೋಷ ವ್ಯಕ್ತಪಡಿಸಿದ್ದಾರೆ.
ಕೋಲಾರದಲ್ಲಿ ಪ್ರತಿಭಟನೆ ಮುಗಿದ ನಂತರ ಕಾಂಗ್ರೆಸ್ ಶಾಸಕರ ಎದುರೇ ಪ್ರತಿಭಟನೆಯಲ್ಲಿ ಭಾಗವಹಿಸಿದವರಿಗೆ ಹಳೆಯ 500 ಹಾಗು 1000 ನೋಟುಗಳನ್ನು ಹಂಚಿದ್ದಾರೆ ಎಂದು ಖಾಸಗಿ ವಾಹಿನಿ ತನ್ನ ವರದಿಯಲ್ಲಿ ತಿಳಿಸಿದೆ.
No comments