ಅತೀ ಉದ್ದದ ಕೂದಲಿನ ಗಿನ್ನಿಸ್ ರೆಕಾರ್ಡ್ ಹೊಂದಬೇಕೆ, ಹಾಗಾದರೆ ಈಕೆಯನ್ನು ಬೀಟ್ ಮಾಡಿ.
ಚೀನಾದ ಕ್ಸೀ ಕ್ಯುಪಿಂಗ್ ಜಗತ್ತಿನ ಅತೀ ಉದ್ದ ಕೂದಲು ಉಳ್ಳ ಮಹಿಳೆ ಎಂಬ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಹೊಂದಿದ್ದಾಳೆ. ಈ ಮಹಿಳೆಯ ಕೂದಲನ್ನು 2004 ರಲ್ಲಿ ಅಳತೆ ಮಾಡಿದಾಗ ಅದು 18 ಅಡಿ 5.54 ಇಂಚು ಉದ್ದವಿತ್ತು.ಹಾಗಾಗಿ ಈಕೆಯನ್ನು ಜಗತ್ತಿನ ಅತೀ ಉದ್ದ ಕೂದಲುಳ್ಳ ಮಹಿಳೆ ಎಂದು ಗಿನ್ನೆಸ್ ವರ್ಲ್ಡ್ ಬುಕ್ ರೆಕಾರ್ಡ್ ಮಾಡಿತ್ತು.ಯಾರೂ ಇದುವರೆಗೂ ಈ ರೆಕಾರ್ಡ್ ಮುರಿಯಲಾಗಿಲ್ಲ ಹಾಗಾಗಿ ಇಂದಿಗೂ ಅತೀ ಉದ್ದ ಕೂದಲಿನ ಗಿನ್ನಿಸ್ ರೆಕಾರ್ಡ್ ಕ್ಸೀ ಕ್ಯುಪಿಂಗ್ ಬಳಿಯೇ ಇದೆ.
ಈಕೆ 1976 ಅಂದರೆ ತನ್ನ 13 ರ ವಯಸ್ಸಿನಿಂದಲೇ ತನ್ನ ಕೂದಲನ್ನು ಬೆಳೆಸುತ್ತಾ ಇದ್ದಾಳೆ. ಅಂದಿನಿಂದ ಇಂದವರೆಗೂ ಒಮ್ಮೆಯೂ ಕೂದಲಿಗೆ ಕತ್ತರಿ ಹಾಕಿಲ್ಲ.
No comments