ಬಾಳಿಗ ಕೊಲೆ ಪ್ರಕರಣ ನರೇಶ್ ಶೆಣೈ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ
ಮಂಗಳೂರು : ಆರ್ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ಪ್ರಕರಣದ ಪ್ರಮುಖ ಆರೋಪಿ ನರೇಶ್ ಶೆಣೈಗೆ ಹೈ ಕೋರ್ಟ್ ನೀಡಿರುವ ಜಾಮೀನು ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಇಂದು ಸುಪ್ರೀಂ ಕೋರ್ಟ್ ಮಾನ್ಯ ಮಾಡಿದೆ ಎಂದು ತಿಳಿದು ಬಂದಿದೆ ,ಬಾಳಿಗಾ ಕುಟುಂಬ ಪರ ವಕೀಲರಾದ ನಾಗಮೋಹನ್ ದಾಸ್ ಸುಮಾರು ಹತ್ತು ನಿಮಿಷಗಳ ಕಾಲ ವಾದ ಮಂಡಿಸಿ ವಿನಾಯಕ ಬಾಳಿಗ ಕೊಲೆ ಪ್ರಕರಣ ತನಿಖೆ ಇನ್ನು ಮುಗಿದಿಲ್ಲ ಈ ಹಂತದಲ್ಲಿ ಪ್ರಮುಖ ಆರೋಪಿಗೆ ಜಾಮೀನು ನೀಡಿದ್ದು ಸರಿಯಲ್ಲ ,ಆರೋಪಿ ನರೇಶ್ ಶೆಣೈ ಸಾಕ್ಷ ನಾಶ ಮಾಡುವ ಸಾಧ್ಯತೆಯ ಬಗ್ಗೆ ಕೋರ್ಟ್ಗೆ ವಿವರಿಸಿದರು ,ಈ ವಾದವನ್ನು ಪುರಸ್ಕರಿಸಿದ ನ್ಯಾಯ ಮೂರ್ತಿಗಳಾದ ಉದಯ್ ಲಲಿತ್ ಮತ್ತು ಪಿನಾಕಿ ಚಂದ್ರ ಘೋಷ್ ಅವರಿದ್ದ ನ್ಯಾಯ ಪೀಠ ಡಸ್ಟಿ ನೋಟೀಸ್ ಜಾರಿ ಮಾಡಿದೆ ಎಂದು ತಿಳಿದು ಬಂದಿದೆ
ಮಾರ್ಚ್ 21 ರಂದು ವಿನಾಯಕ ಬಾಳಿಗಾ ಕೊಲೆ ಯಾಗಿತ್ತು. ಮಾ. 27ರಂದು ಆರೋಪಿಗಳಾದ ವಿನಿತ್ ಪೂಜಾರಿ ಮತ್ತು ನಿಶಿತ್ ದೇವಾಡಿಗರನ್ನು ಬಂಧಿಸಲಾಗಿತ್ತು. ಬಳಿಕ ಹಂತ ಹಂತವಾಗಿ ಶ್ರೀಕಾಂತ್, ಶಿವ ರನ್ನೂ ವಶಕ್ಕೆ ಪಡೆಯಲಾಗಿತ್ತು.ಪ್ರಕರಣದ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದ ನರೇಶ್ ಶೆಣೈ ಅವರನ್ನು ಜೂನ್ 25ರಂದು ಸಿಸಿಬಿ ಪೊಲೀಸ್ ತಂಡ ಬಂಧಿಸಿತ್ತು.ಪ್ರಕರಣಕ್ಕೆ ಕುರಿತಂತೆ ಮೂರನೇ ಹೆಚ್ಚುವರಿ ನ್ಯಾಯಾಲಯಕ್ಕೆ 770 ಪುಟಗಳ ಆರೋಪ ಪಟ್ಟಿ ಸಲ್ಲಿಕೆ ಆಗಿರುತ್ತದೆ.
No comments