ಕಾರ್ಯಕರ್ತರ ಕಡೆಗಣನೆ ಉಡುಪಿ ಬಿಜೆಪಿಯಲ್ಲಿ ಬಿನ್ನಮತ
ಉಡುಪಿ:- ಇಡಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಅಂದರೆ ಅದಕ್ಕೆ ಕರಾವಳಿ ಪ್ರಮುಖ ಅಸ್ತ್ರ ಅದರಲ್ಲೂ ಉಡುಪಿ ಅಂದರೆ ಬಿಜೆಪಿ ಪಾಲಿಗೆ ಚಿನ್ನದ ಮೊಟ್ಟೆ ಆದರೆ ಇದೇ ಉಡುಪಿಯಲ್ಲಿ ಈಗ ಬಿನ್ನಮತ ಬುಗಿಲೆದ್ದಿದೆ ಕಾರಣ ಕಳೆದ ಕೆಲವು ದಿನದಿಂದ ಆಪರೇಷನ್ ಕಮಲದ ಮೂಲಕ ಘಾಟಾನುಘಟಿ ಕಾಂಗ್ರೆಸ್ ನಾಯಕರನ್ನು ತನ್ನತ ಸೇಳೆದು ಕೊಂಡಿದೆ .
ಈ ಆಪರೇಷನ್ ಈಗ ಬಿಜೆಪಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ ಕಾರಣ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ನಾಯಕರಿಗೆ ಸ್ಥಾನ ಮಾನ ಕೊಡುವ ಭರವಸೆ ನೀಡಿದೆ ಈ ಬಿನ್ನಮತ ಸ್ಫೋಟಗೊಳ್ಳಲು ಪ್ರಮುಖ ಕಾರಣ .
ಇ ಹಿಂದೆ ಕಾಂಗ್ರೆಸ್ ನಲ್ಲಿ ಸಂಸದರಾಗಿ ಆಯ್ಕೆಯಾದ ಜಯಪ್ರಕಾಶ್ ಹೆಗ್ಡೆ ಈಗ ಬಿಜೆಪಿ ಗೆ ಸೇರ್ಪಡೆ ಗೊಂಡಿದ್ದು ಕರಾವಳಿ ಬಿಜೆಪಿ ಕಾರ್ಯಕರ್ತರಲ್ಲಿ ಆಕ್ರೋಶದ ಕಿಡಿಯನ್ನು ಹೊತ್ತಿಸಿದ್ದೆ .ಸಂಸದರಾಗಿ ಇದ್ದ ಸಂದರ್ಭದಲ್ಲಿ ಇದೆ ಜಯಪ್ರಕಾಶ್ ಹೆಗ್ಡೆ ಅವರು ಅಮಾಯಕ ಹಿಂದುಗಳ ಮೇಲೆ ಸುಳ್ಳು ಆರೋಪ ಹೊರಿಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಹಾಗೂ ಅವರೋಬ್ಬ ಹಿಂದು ವೀರೊದಿ ರಾಜಕಾರಣಿ ಅನ್ನುವ ಭಾವನೆ ಬಿಜೆಪಿ ಕಾರ್ಯಕರ್ತರನ್ನು ಕೆರಳಿಸಿದೆ.
ಇದಕ್ಕೆ ಸಂಭದಿಸಿದಂತೆ ಸಾವಿರಾರು ಕಾರ್ಯಕರ್ತರು ಜಯಪ್ರಕಾಶ್ ಹೆಗ್ಡೆ ಅವರ ಸೇರ್ಪಡೆ ಗೆ ಬಾರಿ ವಿರೋಧ ವ್ಯಕ್ತ ವಡಿಸುತ್ತಾ ಇದ್ದು ಅವರನ್ನು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆ ಗೊಳ್ಳಿಸಿದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿಗೆ ನೀಡುವ ಎಲ್ಲಾ ಬೆಂಬಲ ಮತ್ತು ಪಕ್ಷ ಪರಮಾಡುವ ಎಲ್ಲಾ ಕೆಲಸವನ್ನು ನಿಲ್ಲಿಸುವ ಹಾಗೂ ಮುಂದಿನ ಚುನಾವಣೆಯಲ್ಲಿ ಪಕ್ಷದಿಂದ ದೂರ ಸರಿಯುವ ಮಾತುಗಳು ಕೇಳಿ ಬರುತ್ತಾ ಇವೆ
No comments