Breaking News

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅತ್ಯಾಚಾರ ಆರೋಪಿಯೇ.?


ದೆಹಲಿ ಮುಖ್ಯಮಂತ್ರಿ ಮತ್ತೆ ಸುದ್ದಿಯಲ್ಲಿದ್ದಾರೆ ಆದರೆ ಈ ಬಾರಿ ಸುದ್ದಿಯಾಗಿರುವುದು ಅತ್ಯಾಚಾರ ಪ್ರಕರಣವೊಂದರ ಆರೋಪಿಯಾಗಿ.? ಹೌದು ಇಂತಹದೊಂದು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಅರವಿಂದ್ ಕೇಜ್ರಿವಾಲ್ ಎಂಬ ಯುವಕ 1987 ರಲ್ಲಿ ಖಾರಗ್ ಪುರ ಐಐಟಿ ಯಲ್ಲಿ ವಿದ್ಯಾರ್ಥಿಯಾಗಿದ್ದಾಗ ಸ್ಥಳೀಯ ಯುವತಿಯೋರ್ವಳ ಮೇಲೆ ಅತ್ಯಾಚಾರ ಮಾಡಿದ ಬಗ್ಗೆ ವರದಿ ಮಾಡಿರುವ 'ಟೆಲಿಗ್ರಾಫ್ ಪೇಪರ್' ನ ಕ್ಲಿಪ್ಪಿಂಗ್ ಈಗ ಚರ್ಚೆಗೆ ಗ್ರಾಸವಾಗಿದೆ.ಟೆಲಿಗ್ರಾಫ್ ವರದಿಯನ್ನು ಇಟ್ಟುಕೊಂಡು 'ಜಾಗೃಕ್ ಭಾರತ್' ಎಂಬ ವೆಬ್ ಸೈಟ್ ಸುದ್ದಿ ತಯಾರು ಮಾಡಿದ್ದು ಇದು ಈಗ ಎಲ್ಲೆಡೆ ಹರಿದಾಡುತ್ತಿದೆ.
1987, ಜೂನ್ 8ನೇ ತಾರೀಕಿನ 'ಟೆಲಿಗ್ರಾಫ್' ಪೇಪರ್ ವರದಿ ಪ್ರಕಾರ ಖಾರಗ್ ಪುರ 'ಐಐಟಿ'ಯಲ್ಲಿ ವ್ಯಾಸಾಂಗ ಮಾಡುತ್ತಿದ್ದ ಅರವಿಂದ್ ಕೇಜ್ರಿವಾಲ್ ಎಂಬ ಯುವಕ (ಕಾಕತಾಳೀಯ ಎಂಬಂತೆ ದೆಹಲಿ ಮುಖ್ಯಮಂತ್ರಿ ಅದೇ ಸಮಯದಲ್ಲಿ ಅದೇ ಐಐಟಿಯಲ್ಲಿ ವಿದ್ಯಾರ್ಥಿಯಾಗಿದ್ದರು) ತನ್ನ ಗೆಳೆಯರೊಂದಿಗೆ 1987, ಜೂನ್ 5ರಂದು ಶುಕ್ರವಾರ ಪಿಕ್-ನಿಕ್ ಗೆ ಹೋಗಿದ್ದು ಸ್ನೇಹಿತರೆಲ್ಲರು ಮರುದಿನ ಅಂದರೆ ಶನಿವಾರ ರಾತ್ರಿ ಹಾಸ್ಟೆಲ್ ಗೆ ವಾಪಾಸ್ಸಾಗಿದ್ದರೆ ಅರವಿಂದ್ ಕೇಜ್ರಿವಾಲ್ ಮಾತ್ರ ಆದಿತ್ಯವಾರ ರಾತ್ರಿ ವಾಪಾಸ್ಸಾಗಿದ್ದ.
ಇದೇ ಸಂದರ್ಭದಲ್ಲಿ ಗೋಪಾಲ್'ನಗರ್ ಪೋಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣವೊಂದು ದಾಖಲಾಗಿತ್ತು. 19 ವರ್ಷದ ಯುವತಿಯೊಬ್ಬಳು ಅರವಿಂದ್ ಕೇಜ್ರಿವಾಲ್ ಎಂಬ ವ್ಯಕ್ತಿ ತನ್ನ ಮೇಲೆ ಅತ್ಯಾಚಾರ ಮಾಡಿರುವುದಾಗಿ ದೂರು ನೀಡಿದ್ದಳು ಜೊತೆಗೆ ಆರೋಪಿಯ ಗುರುತಿನ ಐಡಿಯನ್ನೂ ಪೋಲೀಸರಿಗೆ ನೀಡಿದ್ದಳು.ದೂರಿನ ಆಧಾರದ ಮೇಲೆ ಪೋಲೀಸರು ಆರೋಪಿಯನ್ನು ಬಂಧಿಸಲು ಐಐಟಿ ಪ್ರವೇಶಿಸುತ್ತಾರೆ.
ಈ ಸಮಯದಲ್ಲಿ ಕೇಜ್ರಿವಾಲ್ ಹಾಸ್ಟೆಲ್ ರೂಂ ನಲ್ಲೇ ಅವಿತು ಕುಳಿತಿದ್ದ. ಹಾಸ್ಟೆಲ್ ವಾರ್ಡನ್ ಸಹಾಯದಿಂದ ಆರೋಪಿಯನ್ನು ಬಂಧಿಸಿದ ಪೋಲೀಸರು ತನಿಖೆಗಾಗಿ ಕರೆದುಕೊಂಡು ಹೋಗಿದ್ದರು.
ಮೂಲ ಸುದ್ದಿಯನ್ನು ಜಾಗೃಕ್ ಭಾರತ್ ಎಂಬ ವೆಬ್ ಸೈಟ್ ಪ್ರಕಟಿಸಿದ್ದು, ಪ್ರಕರಣದ ಸತ್ಯಾಸತ್ಯತೆಯನ್ನು ಬಗ್ಗೆ ಇನ್ನಷ್ಟೇ ತಿಳಿದು ಬರಬೇಕು :
ಜಾಗೃಕ್ ಭಾರತ್ ಲಿಂಕ್ - http://jagrukbharat.com/10462/arvind-kejriwal-rape-accused-shocking-1987-newspaper-clipping-sheds-light

No comments