ಉಪ್ಪು ನೀಲಿಬಣ್ಣಕ್ಕೆ ತಿರುಗುವ ಬಗ್ಗೆ ಜನ ಭಯಪಡಬೇಕಾಗಿಲ್ಲ - ಖಾದರ್
ಬೆಳಗಾವಿ : ರಾಜ್ಯ ಸರ್ಕಾರ ನೀಡೋ ಉಪ್ಪು ನೀಲಿ ಬಣ್ಣಕ್ಕೆ ತಿರುಗುತ್ತಿರುವುದರಿಂದ ಜನ ಆ ಉಪ್ಪು ಬಳಸಲು ಹೆದರುತ್ತಿದ್ದರು. ಸಾಮಜಿಕ ಜಾಲತಾಣದಲ್ಲೂ ಉಪ್ಪು ನೀಲಿ ಬಣ್ಣಕ್ಕೆ ತಿರುಗೋ ವೀಡಿಯೋ ವೈರಲ್ ಆಗಿತ್ತು.
ಆದರೆ ಈಗ ಆಹಾರ ಹಾಗೂ ನಾಗರೀಕ ಸರಬರಾಜು ಇಲಾಖೆ ಸಚಿವ ಯು.ಟಿ.ಖಾದರ್ ಖಾಸಗಿ ಮಾದ್ಯಮವೊಂದರ ಪ್ರಶ್ನೆಗೆ ಉತ್ತರಿಸುತ್ತ ಜನರು ಉಪ್ಪು ನೀಲಿಬಣ್ಣಕ್ಕೆ ತಿರುಗುವ ಬಗ್ಗೆ ಭಯಪಡುವ ಅವಶ್ಯ ಕತೆ ಇಲ್ಲ, ರಾಜ್ಯಾದ್ಯಂತ ಜನ ಕಬ್ಬಿಣಾಂಶ ಕೊರತೆಯಿಂದ ಬಳಲುತ್ತಿದ್ದು, ಆ ಕಾರಣಕ್ಕೆ ರಾಜ್ಯ ಸರ್ಕಾರವೇ ಇಂಥಹ ಉಪ್ಪನ್ನು ಪೂರೈಸುತ್ತಿದೆ , ಅಲ್ಲದೆ ಉಪ್ಪು ಬಿಳಿಬಣ್ಣದಲ್ಲಿಯೇ ಇರಬೇಕು ಎಂದು ಎಲ್ಲಿಯೂ ಹೇಳಿಲ್ಲ.ಉಪ್ಪನ್ನು ಜನ ಬಳಸಬಹುದು ನೀಲಿ ಬಣ್ಣಕ್ಕೆ ತಿರುಗೋ ಬಗ್ಗೆ ಆತಂಕಪಡಬೇಕಾಗಿಲ್ಲ ಎಂದು ಹೇಳಿದರು.
No comments