Breaking News

ಟ್ಯಾಕ್ಸಿ ಚಾಲಕನ ಜನ್-ಧನ್ ಖಾತೆಗೆ 9,806 ಕೋಟಿ ಹಣ ಜಮೆ ಮಾಡಿದ ಬ್ಯಾಂಕ್.

ಪಂಜಾಬ್ : ಪಂಜಾಬ್ ನ ಟ್ಯಾಕ್ಸಿ ಚಾಲಕ ಬಲ್ವಿಂದರ್ ಸಿಂಗ್ ನ ಜನ್-ಧನ್ ಖಾತೆಗೆ 9,806 ಕೋಟಿ ಹಣ ಜಮೆ ಮಾಡಿದ ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲ. ಬ್ಯಾಂಕ್ ನೌಕರನ ಅಚಾತುರ್ಯದಿಂದ ಈ ಘಟನೆ ನಡೆದಿದ್ದು ಜಮಾ ಮಾಡುವ ಮೊತ್ತ ಬರೆಯಬೇಕಾದ ಜಾಗದಲ್ಲಿ 11 ಸಂಖ್ಯೆಯ ಬ್ಯಾಂಕ್ ಅಕೌಂಟ್ ನಂಬರ್ ಬರೆದಿದ್ದೇ ಈ ಘಟನೆಗೆ ಕಾರಣ ಎಂದು ತಿಳಿದುಬಂದಿದೆ.
ಈ ತಿಂಗಳ ಪ್ರಾರಂಭದಲ್ಲಿ ಈ ಘಟನೆ ನಡೆದಿದ್ದು , ಮರುದಿನವೇ ಟ್ಯಾಕ್ಸಿ ಚಾಲಕನ ಖಾತೆಯಿಂದ ಬ್ಯಾಂಕ್ ಹಣ ವಾಪಾಸ್ ಪಡೆದಿದೆ.

No comments