Breaking News

ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಜನ ಬುದ್ದಿ ಕಲಿಸಲಿದ್ದಾರೆ ಎಸ್‌ಡಿಪಿಐ


ಮಂಗಳೂರು : ಪುತ್ತೂರು ಐನೂರು ಮತ್ತು ಸಾವಿರ ನೋಟು ನಿಷೇಧ ವಿಚಾರದಲ್ಲಿ ದಿಡೀರ್ ಆಗಿ ಒಬ್ಬರೇ ನಿರ್ಧಾರ ಕೈಗೊಂಡು ಸರ್ವಾಧಿಕಾರ ಮೆರೆದಿದ್ದಾರೆ ಮತ್ತು  ಕಪ್ಪು ಹಣದ ವಿಚಾರದಲ್ಲಿ ಬಡವರಿಗೆ ತೊಂದರೆ  ನೀಡಿದ್ದಾರೆ ಎಂದು ಎಸ್‌ಡಿಪಿಐ  ಆರೋಪಿಸಿದೆ .
ಕೇವಲ ೫ ಲಕ್ಷ ಮಂದಿಯನ್ನು ಸಮೀಕ್ಷೆ ಮಾಡಿ ತಮಗೆ ಬೆಂಬಲ ಘೋಷಿಸಿದ್ದಾರೆ ಎನ್ನುತ್ತಿರುವ ಪ್ರಧಾನಿ ಮೋದಿ ಅವರು ಉಳಿದ ೨೭ ಕೋಟಿ ಜನರನ್ನು ಭಾರತೀಯರು ಅಲ್ಲ ಎಂದು ಭಾವಿಸಿದ್ದಾರೆ.  ಪ್ರಧಾನಿ ಮೋದಿಯವರನ್ನು ದೇಶದ ಜನತೆ ಮುಂದಿನ ಚುನಾವಣೆಯಲ್ಲಿ ಕಪ್ಪು ಪಟ್ಟಿಗೆ ಸೇರಿಸಲಿದ್ದಾರೆ ಎಂದು ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಎಂ.ಕೂಸಪ್ಪ ಮಾತನಾಡಿ ಹೇಳಿದರು. ಪ್ರತಿಭಟನೆಯ ಬಳಿಕ ಸಹಾಯಕ ಆಯುಕ್ತರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
 ಎಸ್‌ಡಿಪಿಐ ವತಿಯಿಂದ ನಡೆದ ‘ಆಕ್ರೋಶ್ ದಿವಸ್’ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ಬಡವರನ್ನು ಮೂರ್ಖರನ್ನಾಗಿಸಿ ಬ್ಯಾಂಕ್ ಬಾಗಿಲಿನಲ್ಲಿ ನಿಲ್ಲಿಸುವ ಮೊದಲು ನಿಜವಾದ ಕಪ್ಪು ಹಣವಂತರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು. ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಕೆ.ಎ ಸಿದ್ದಿಕ್ ಮಾತನಾಡಿ, ನೋಟು ನಿಷೇಧದಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಕುಸಿತಗೊಂಡಿದೆ. ಬಡವರು ಹಾಗೂ ಸಣ್ಣ ಪುಟ್ಟ ವ್ಯಾಪಾರಿಗಳು ಕೆಲಸವಿಲ್ಲದೆ ಕಣ್ಣೀರು ಹಾಕುವ ಸ್ಥಿತಿ ಬಂದಿದ್ದು, ಶ್ರೀಮಂತರಿಗೆ ಅನುಕೂಲಕರವಾಗಿದೆ. ಶ್ರೀಮಂತರು ಕಪ್ಪು ಹಣವನ್ನು ನಗದು ರೂಪದಲ್ಲಿಡದೆ ಇತರ ರೂಪದಲ್ಲಿ ದಾಸ್ತಾನು ಮಾಡಿದ್ದಾರೆ. ಹಾಗಾಗಿ ನೋಟು ನಿಷೇಧದಿಂದ ಅವರ ಕಪ್ಪು ಹಣ ಹೊರಕ್ಕೆ ಬರುವುದೂ ಇಲ್ಲ, ಬಡ ಹಾಗೂ ಸಾಮಾನ್ಯ ವರ್ಗದ ಜನತೆಗೆ ಮಾತ್ರ ತೊಂದರೆಯಾಗಿದೆ. ಕೋಟ್ಯಾಂತರ ಕಪ್ಪು ಹಣ ಹೂಡಿಟ್ಟಿರುವ ಬಿಜೆಪಿ ಮುಖಂಡರ ಮನೆಗೆ ಮೊದಲು ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡುತ್ತಿದ್ದರೆ ಅದೆಷ್ಟೋ ಕಪ್ಪು ಹಣ ಮೊದಲೇ ಹೊರಬರುತ್ತಿತ್ತು ಎಂದು ಆರೋಪಿಸಿದರು.
ಸಭೆಯಲ್ಲಿ ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಜಾಬಿರ್ ಅರಿಯಡ್ಕ, ಪ್ರಮುಖರಾದ ಇಬ್ರಾಹಿಂ ಸಾಗರ್, ಮುಸ್ತಫಾ , ಅಝೀಝ್ ನಿನ್ನಿಕಲ್, ಪಿಬಿಕೆ ಮುಹಮ್ಮದ್, ಅಝೀಝ್ ಕಬಕ, ಖಾದರ್ ಬಪ್ಪಳಿಗೆ, ಹಂಝ ಅಫ್ನಾನ್ ಮತ್ತಿತರರು ಉಪಸ್ಥಿತರಿದ್ದರು.
source sanje waani

No comments