ಎತ್ತಿನ ಹೊಳೆ ಯೋಜನೆ ವಿರೋಧಿಸಿ ವಿಧಾನಪರಿಷತ್ನಲ್ಲಿ ದ್ವನಿ ಎತ್ತಿದ ಕೋಟಾಶ್ರೀನಿವಾಸಪೂಜಾರಿ
ಬೆಳಗಾವಿ : ವಿಧಾನಪರಿಷತ್‌ನಲ್ಲಿ ಎತ್ತಿನಹೊಳೆ ಯೋಜನೆ ವಿರುದ್ಧ ವಾದ, ಪ್ರತಿವಾದ ನಡೆದು ಕರಾವಳಿ ಮತ್ತು ಬಯಲು ಸೀಮೆಯ ನೀರಿನ ಸಮಸ್ಯೆ ಬಗ್ಗೆ ವಾಕ್ ಸಮರಕ್ಕೆ ವಿಧಾನಪರಿಷತ್ ವೇದಿಕೆಯಾಯಿತು.
ವಿಧಾನಪರಿಷತ್‌ನ ಪ್ರಶ್ನೋತ್ತರ ಅವಧಿಯಲ್ಲಿ ಕೋಟಾಶ್ರೀನಿವಾಸಪೂಜಾರಿ, ಎತ್ತಿನ ಹೊಳೆ ಯೋಜನೆಯಿಂದ ಕರಾವಳಿ ಭಾಗದ ಜನರಿಗೆ ಆಗುವ ನೀರಿನ ತೊಂದರೆ ಬಗ್ಗೆ ದ್ವನಿ ಎತ್ತಿದರು , ನೇತ್ರಾವತಿ ತಿರುವು ಯೋಜನೆಯಿಂದ ಕರಾವಳಿಯಲ್ಲಿ ಕುಡಿಯುವ ನೀರಿಗೆ ಜನರು ಪರದಾಡುವ ಪರಿಸ್ಥಿತಿ ಬರಲಿದೆ ಇದನ್ನು ಮೊದಲು ನಿವಾರಿಸಿ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಅವರಿಗೆ ಮನವಿ ಮಾಡಿದರು.
ಆಗ ಇದಕ್ಕೆ ಉತ್ತರಿಸಿದ ಎಂ.ಬಿ. ಪಾಟೀಲ್, ಯೋಜನೆಗೆ ಗುದ್ದಲಿ ಪೂಜೆ ಮಾಡಿದ್ದೇ ಬಿಜೆಪಿ ಸರ್ಕಾರ. ಈಗ ಅದನ್ನು ನಾವು ಕಾರ್ಯರೂಪಕ್ಕೆ ತರಲು ಮುಂದಾಗಿದ್ದೇವೆ ಎನ್ನುತ್ತಿದ್ದಂತೆ ಕರಾವಳಿ ಭಾಗದ ಗಣೇಶ್‌ಕಾರ್ಣಿಕ್ ಸೇರಿದಂತೆ ಹಲವರು ಯೋಜನೆಯನ್ನು ಕೈಬಿಡಿ. ಇಲ್ಲದಿದ್ದರೆ ಆ ಭಾಗದ ಜನರಿಗೆ ಅನ್ಯಾಯವಾಗಲಿದೆ ಎಂದು ಹೇಳಿದರು.
ಇದಕ್ಕೆ ಆಡಳಿತಪಕ್ಷದ ವಿ.ಎಸ್. ಉಗ್ರಪ್ಪ ಸೇರಿದಂತೆ ಹಲವು ಸದಸ್ಯರು ಎತ್ತಿನಹೊಳೆ ಯೋಜನೆ ಬಗ್ಗೆ ಪರವೋ ವಿರೋಧವೋ ಎನ್ನುವುದನ್ನು ಬಿಜೆಪಿ ಸ್ಪಷ್ಟಪಡಿಸಿಬೇಕು ಎಂದು ಆಗ್ರಹಿಸಿದ್ದರಿಂದ ಕೆಲ ಕಾಲ ಮಾತಿನ ಚಕಮಕಿ, ಗದ್ದಲ, ಕೋಲಾಹಲವೂನಡೆಯಿತು ಎಂದು ತಿಳಿದು ಬಂದಿದೆ
No comments