Breaking News

ಹಾಸನಕಾಡುಗಳ್ಳರಿಗೆ ಗುಂಡಿನ ಭಾಗ್ಯ ಒಬ್ಬ ಸಾವು


ಹಾಸನ ತಾಲೂಕಿನ ದೇವಿ ಹಳ್ಳಿ ಸಮೀಪದ ತಿರುಮಲ ದೇವರ ಕಾಡಿನಲ್ಲಿ ಹಾಸನ ಅರಣ್ಯ ಇಲಾಖೆ ಸಿಬ್ಬಂದಿ ಶ್ರೀ ಗಂಧ ಕಳ್ಳರನ್ನು ಹಿಡಿಯಲು ನಡೆಸಿದ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯವರು ಹಾರಿಸಿದ ಗುಂಡಿಗೆ ಮತಿಘಟ್ಟ ಗ್ರಾಮದ ಮಂಜ್ಜಪ್ಪ   (೩೧) ಎಂಬುವವರು ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ ,ಈ ಎನ್ಕೌಂಟರ್ ನಿಂದ ಅರಣ್ಯ ಇಲಾಖೆಯ ಮೇಲೆ ಸಂಶಯ ಕಂಡು ಬರುತಿದೆ.ಶ್ರೀ ಗಂಧ ಕಳ್ಳರಿಗೆ ಸಹಕರಿಸುತ್ತಿದ್ದ ಎಂದು ಹೇಳಲಾದ ಮತಿಘಟ್ಟ ಗ್ರಾಮದ ಮಜ್ಜಪ್ಪ ಈ ಎನ್ಕೌಂಟರ್ ನಲ್ಲಿ ಬಲಿಯಾದವರು ,ಅರಣ್ಯ ಇಲಾಖೆಯವರು ಹೇಳುವ ಪ್ರಕಾರ ಶ್ರೀ ಗಂಧ ಕಳ್ಳರನ್ನು ಹಿಡಿಯುವ ನಿಟ್ಟಿನಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ್ದೆವು ಹೊರತು ಕಾಡು ಗಳ್ಳರ ಮೇಲೆ ಗುಂಡು ಹಾರಿಸಿಲ್ಲ ಎಂಬ ಸ್ಪಷ್ಟನೆ ನೀಡುತಾರೆ,ಹಾಗಾದರೆ ಗಾಳಿಯಲ್ಲಿ ಹಾರಿಸಿದ ಗುಂಡು ಮಂಜ್ಜಪ್ಪ ಅವರಿಗೆ ಹೇಗೆ ತಗುಲಿತು ಎಂಬುವುದು ಯಕ್ಷ ಪ್ರಶ್ನೆ ಆಗಿದೆ ,ಅರಣ್ಯ ಇಲಾಖಾ ಸಚಿವ ರಮಾನಾಥ್ ರೈ ಕಾರ್ಯಚರಣೆ ಕೈಗೊಂಡ ಅಧಿಕಾರಿಗಳ ಮೇಲೆ ಯಾವ ರೀತಿಯ ತನಿಖೆ ನಡೆಸಲು ಆದೇಶ ನೀಡುತಾರೆ ಎಂದು ಕಾಡು ನೋಡ ಬೇಕಿದೆ 


No comments