Breaking News

ನೋಟು ವಿನಿಮಯ ಅವಧಿ ವಿಸ್ತರಣೆ ಸಾಧ್ಯತೆ..?

ನವದೆಹಲಿ - 500 ರೂ.ಗಳು ಮತ್ತು 1,000 ರೂ. ಮುಖಬೆಲೆಯ ನೋಟುಗಳಿಗೆ ನಿಷೇಧ ಹೇರಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಡಿ.02ಟೋಲ್ ಫ್ರೀ ವಿನಾಯತಿಯನ್ನು ವಿಸ್ತರಿಸಲಾಗಿದೆ.

ನೋಟು ಅವಧಿ ವಿಸ್ತರಣೆ..?

ಅಮಾನ್ಯಗೊಂಡಿರುವ 500 ರೂ.ಗಳು ಮತ್ತು 1,000 ರೂ.ಗಳ ನೋಟುಗಳ ವಿನಿಮಯಗೊಳಿಸಲು ಇಂದು ನಿಗದಿಗೊಳಿಸಲಾಗಿದ್ದ ಗಡುವನ್ನು ಕೇಂದ್ರ ಸರ್ಕಾರ ಇನ್ನು ಒಂದು ವಾರ ಅಥವಾ 10 ದಿನಗಳ ಕಾಲ ವಿಸ್ತರಿಸಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.   ಹಳೆ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ನೀಡಿರುವ ಕಾಲಾವಕಾಶ ಕಡಿಮೆಯಾಗಿದೆ ಎಂಬ ಬಗ್ಗೆ ವ್ಯಾಪಕ ದೂರುಗಳ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗಡುವನ್ನು ಇನ್ನೂ ಒಂದು ವಾರ ಅಥವಾ ಅದಕ್ಕೂ ಹೆಚ್ಚಿನ ಅವಧಿಗೆ ವಿಸ್ತರಿಸಲಿದ್ದಾರೆ. ಈ ಬಗ್ಗೆ ಇಂದು ಸಂಜೆ ಅಧಿಕೃತ ಘೋಷಣೆ ಹೊರಬೀಳಲಿದೆ ಎಂದು ಮೂಲಗಳು ಹೇಳಿವೆ.

ಕಳೆದ ರಾತ್ರಿ ಮೋದಿ ಅವರು ಹಣಕಾಸು ಸಚಿವ ಅರುಣ್ ಜೇಟ್ಲಿ ಮತ್ತು ಹಣಕಾಸು ಇಲಾಖೆಯ ಉನ್ನತಾಧಿಕಾರಿಗಳ ಸಭೆ ನಡೆಸಿದ್ದು, ಹಳೆ ನೋಟು ವಿನಿಮಯಕ್ಕಾಗಿ ಗಡುವು ವಿಸ್ತರಿಸುವುದು ಸೂಕ್ತ ಎಂಬ ಅಭಿಪ್ರಾಯ ಸಹ ವ್ಯಕ್ತವಾಗಿವೆ. ಈ ಹಿನ್ನೆಲೆಯಲ್ಲಿ ಗಡುವು ವಿಸ್ತರಣೆಯಾಗಲಿದೆ.  ಇಂದು ಸಂಜೆ  ಪ್ರಧಾನಿಯವರು ಮತ್ತೊಂದು ಸಭೆ ಕರೆದಿದ್ದು, ಅಲ್ಲಿ ಅಂತಿಮ ತೀರ್ಮಾನ ಕೈಗೊಂಡ ಬಳಿಕ ಗಡುವು ವಿಸ್ತರಣೆಯ ಬಗ್ಗೆ ಅಧಿಕೃತ ಘೋಷಣೆ ಹೊರಬೀಳಲಿದೆ.  ಆಸ್ಪ್ರತ್ರೆಗಳು, ವೈದ್ಕಕೀಯ ಸೌಲಭ್ಯಗಳು, ಪೆಟ್ರೋಲ್ ಬಂಕ್‍ಗಳು, ಟೋಲ್‍ಗಳು ಸೇರಿದಂತೆ ವಿವಿಧೆಡೆ ಹಳೆ ನೋಟುಗಳ ವಿನಿಮಯ ಅವಧಿ ಗಡವು ಇಂದು ರಾತ್ರಿ 12 ಗಂಟೆಗೆ ಕೊನೆಗೊಳ್ಳಲಿದ್ದು, ವಿಸ್ತರಣೆಯಾಗುವುದು ಬಹುತೇಖ ಖಚಿತವಾಗಿದೆ.

No comments