ನೂತನ ಅಮೇರಿಕಾ ಅಧ್ಯಕ್ಷ ಟ್ರಂಪ್ ಅವರಿಗೆ ಸೈ ಎಂದರು ದಲಾಯ್ ಲಾಮಾ
ಡೊನಾಲ್ಡ್ ಟ್ರಂಪ್ ಅಮೆರಿಕಾ ಅಧ್ಯಕ್ಷರಾಗುವುದರಿಂದ ನನಗೆ ಯಾವುದೇ ತೊಂದರೆಯಿಲ್ಲ ಎಂದು ಟಿಬೆಟಿಯನ್ ಧರ್ಮಗುರು ದಲಾಯಿ ಲಾಮಾ ಹೇಳಿದ್ದಾರೆ, ಅಮೆರಿಕಾ ಅಧ್ಯಕ್ಷಿಯ ಚುನಾವಣೆ ವೇಳೆ ಮುಸ್ಲಿಂ ವಿರೋಧಿ ನಿಲುವನ್ನು ತಳೆದು ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ ದಲಾಯಿ ಲಾಮಾ, ಚುನಾವಣಾ ಪ್ರಚಾರದ ವೇಳೆ ಅಭ್ಯರ್ಥಿಗಳಿಗೆ ಮಾತನಾಡಲು ಹೆಚ್ಚಿನ ಸ್ವಾತಂತ್ಯ್ರವಿರುತ್ತದೆ. ಒಂದು ಬಾರಿ ಅವರು ಚುನಾವಣೆಯಲ್ಲಿ ಆಯ್ಕೆಯಾದ ಮೇಲೆ ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಹಾಗೂ ಹೊಣೆಗಾರಿಕೆ ಇರುತ್ತದೆ , ಆಗ ವಾಸ್ತವತೆ ಅರಿತುಕೊಂಡು ಕೆಲಸ ಮಾಡುತ್ತಾರೆ ಎಂದು ದಲಾಯಿ ಲಾಮಾ ಹೇಳಿದ್ದಾರೆ
No comments