Breaking News

ಮೂರು ಆಸ್ಪತ್ರೆಗಳಲ್ಲಿ ಮೃತ ಘೋಷಿತ ಮಹಿಳೆ ಅಂತ್ಯಸಂಸ್ಕಾರ ಸಮಯದಲ್ಲಿ ಮತ್ತೆ ಜೀವಂತವಾದಾಗ.

ಹರಿಯಾಣ : ಮಹಿಳೆಯೊಬ್ಬರನ್ನು ಮೂರು ಆಸ್ಪತ್ರೆಗಳ ವೈದ್ಯರು ಮೃತ ಘೋಷಿಸಿದ ನಂತರ ಅಂತ್ಯಸಂಸ್ಕಾರದ ಸಿದ್ದತೆಯ ಸಮಯದಲ್ಲಿ ಮಹಿಳೆ ಮತ್ತೆ ಜೀವಂತವಾದ ಘಟನೆ ಹರಿಯಾಣದ ಫರೀದಾ ಬಾದ್ ನಲ್ಲಿ ನಡೆದಿದೆ.
ಫರೀದಾಬಾದ್ ನ 60 ವರ್ಷದ ಮಹಿಳೆ ಕಿರಣ್ ದೇವಿ ಯನ್ನು ಮೆದುಳಿನ ನರ ತೊಂದರೆಯಿಂದಾಗಿ ಹಿಸಾರ್ ನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಅಲ್ಲಿ ಆಕೆ ರೋಗ ಉಲ್ಬಣಿಸಿ ಅಸುನೀಗಿದ್ದಳು. ಮಹಿಳೆ ಮೃತಪಟ್ಟಿರುವುದನ್ನು ವೈದ್ಯರು ದೃಡಪಡಿಸಿದ್ದರು.
ಆದರೆ ಆ ಮಹಿಳೆಯ ಸಂಬಂದಿಕರು ಅಷ್ಟಕ್ಕೆ ಸುಮ್ಮನಾಗದೆ ಮಹಿಳೆಯನ್ನು ಬದುಕಿಸಲು ಇನ್ನೊಂದು ಪ್ರಖ್ಯಾತ ಆಸ್ಪತ್ರೆಗೆ ದಾಖಲಿಸಿದರು, ಆದರೆ ಅಲ್ಲಿಯ ವೈದ್ಯರೂ ಆಕೆ ಮೃತಪಟ್ಟಿರುವುದನ್ನು ಖಚಿತಪಡಿಸಿದರು.
ಮಹಿಳೆ ಮೃತಪಟ್ಟಿರುವ ಸುದ್ದಿ ತಿಳಿದ ಎಲ್ಲಾ ಸಂಬಂಧಿಕರು ಮೃತ ಮಹಿಳೆಯ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ಬರತೊಡಗಿದರು. ಹೀಗೆ ಅಂತ್ಯ ಸಂಸ್ಕಾರಕ್ಕಾಗಿ ಮೃತದೇಹವನ್ನು ಹಿಸಾರ್ ನಿಂದ ಫತೇಹಾಬಾದ್ ಗೆ ಆಂಬ್ಯುಲೆನ್ಸ್ ನಲ್ಲಿ ಕೊಂಡೊಯ್ಯಲಾಗುತ್ತಿತ್ತು.ಆ ಸಮಯದಲ್ಲಿ ಆಂಬ್ಯುಲೆನ್ಸ್ ನಲ್ಲಿದ್ದ ಒಬ್ಬನಿಗೆ ಮೃತ ಮಹಿಳೆಯ ಕೈ ಅಲುಗಾಡಿದ ಹಾಗೆ ಭಾಸವಾಯಿತು ಹಾಗಾಗಿ ಮಹಿಳೆಯನ್ನು ಮತ್ತೆ ಫತೇಹಾ ಬಾದ್ ನ ಆಸ್ಪತ್ರೆಯೊಂದಕ್ಕೆ ತೆಗೆದುಕೊಂಡು ಹೋಗಲಾಯಿತು. ಆದರೆ ದುರಾದೃಷ್ಟಕ್ಕೆ ಆ ಆಸ್ಪತ್ರೆಯ ವೈದ್ಯರು ಅಲ್ಲಿಯೂ ಮಹಿಳೆ ಮೃತಪಟ್ಟಿರುವುದಾಗಿ ಹೇಳಿದರು.
ಇದರ ನಂತರ ಸಂಬಂಧಿಕರು ಮಹಿಳೆಯ ಮೃತದೇಹವನ್ನು ಮನೆಗೆ ತಂದು ಸ್ಟ್ರೆಚರ್ ಮೇಲೆ ಇಟ್ಟು ಮಹಿಳೆಯ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಶುರು ಮಾಡಿದರು. ಅಂತ್ಯಸಂಸ್ಕಾರಕ್ಕಾಗಿ ಯಾವಾಗ ಮಹಿಳೆಯ ಮೂಗಿನಲ್ಲಿದ್ದ ಆಮ್ಲಜನಕ ಪೈಪ್ ತೆಗೆಯಲಾಯಿತೋ ಆವಾಗ ಮೃತಪಟ್ಟಿದ್ದ ಮಹಿಳೆ ಮತ್ತೆ ಉಸಿರಾಡಲು ಶುರು ಮಾಡಿದರು. 
ಈಗ ಮಹಿಳೆಯನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲು ಮಾಡಲಾಗಿದೆ. ಅಲ್ಲಿ ಆಕೆಯ ಚಿಕಿತ್ಸೆ ನಡೆಯುತ್ತಿದೆ.
ವಿಸ್ಮಯ ಅಲ್ಲಾ...!!!

No comments