Breaking News

ನವೆಂಬರ್ 8 ರ ನಂತರ ಜನ್ ದನ್ ಖಾತೆಯಲ್ಲಿ ಜಮಾ ಆದ ಹಣವೆಷ್ಟು ಗೊತ್ತೇ. ಇಲ್ಲಿದೆ ವರದಿ.


ದೆಹಲಿ : ನವೆಂಬರ್ 8 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ 500 ಹಾಗೂ 1000 ಮುಖಬೆಲೆಯ ನೋಟುಗಳು ನಿಶೇಧವಾದ ನಂತರ ಜನ್ ಧನ್ ಬ್ಯಾಂಕ್ ಖಾತೆಗಳಲ್ಲಿ ಇಲ್ಲಿವರೆಗೆ 64,252.15 ಕೋಟಿಗೂ ಅಧಿಕ ಹಣ ಜಮಾವಣೆ ಆಗಿದೆ.
ಹಣ ಜಮಾವಣೆ ಆದ ರಾಜ್ಯಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿ  ಉತ್ತರ ಪ್ರದೇಶವಿದೆ, ಅಲ್ಲಿ 10,670 ಕೋಟಿ ರೂಪಾಯಿ ಜನ್ ಧನ್ ಖಾತೆಯಲ್ಲಿ ಜಮಾ ಆಗಿದೆ . ಇನ್ನು ಎರಡನೇ ಸ್ಥಾನ ಪಶ್ಚಿಮ ಬಂಗಾಳ ಹಾಗೂ ಮೂರನೇ ಸ್ಥಾನದಲ್ಲಿ ರಾಜಸ್ಥಾನವಿದೆ. ಈ ಪಟ್ಟಿಯನ್ನು ಸರ್ಕಾರ ಶುಕ್ರವಾರ ಬಿಡುಗಡೆ ಮಾಡಿದೆ.
ರಾಜ್ಯ ಹಣ ಕಾಸು ಸಚಿವ ಸಂತೋಷ್ ಕುಮಾರ್ ಗಂಗಾವರ್ ಲೋಕಸಭೆಯಲ್ಲಿ ಶುಕ್ರವಾರ ಮಾತನಾಡುತ್ತಾ " ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಲ್ಲಿ ತೆರೆಯಲಾದ ಒಟ್ಟು 25.58 ಕೋಟಿ ಖಾತೆಗಳಲ್ಲಿ  16 ನವೆಂಬರ್ ವರೆಗೆ 64,252.15 ಕೋಟಿ ಹಣ ಜಮಾ ಆಗಿದೆ ,ಇದರಲ್ಲಿ ಉತ್ತರ ಪ್ರದೇಶ ಪ್ರಥಮ ಸ್ಥಾನದಲ್ಲಿದ್ದು, ಅಲ್ಲಿ ಈ ಯೋಜನೆಯ ಪ್ರಯುಕ್ತ ಅತೀ ಹೆಚ್ಚು 3.79 ಕೋಟಿ ಖಾತೆ ತೆರೆಯಲಾಗಿತ್ತು. ಈ ಖಾತೆಗಳಲ್ಲಿ 10,670.62 ಕೋಟಿ ಹಣ ಜಮಾವಣೆ ಮಾಡಲಾಗಿದೆ. ಇದರ ನಂತರ ಬಂಗಾಳದ 2.44 ಕೋಟಿ ಖಾತೆಗಳಲ್ಲಿ  7,826.44 ಕೋಟಿ ಜಮಾವಣೆ ಆಗಿದೆ.
ರಾಜಸ್ತಾನದಲ್ಲಿ 1.86 ಕೋಟಿ ಖಾತೆಗಳಲ್ಲಿ 5,345.57 ಕೋಟಿ, ಬಿಹಾರದ 2.62 ಕೋಟಿ ಖಾತೆಗಳಲ್ಲಿ 4,912.79 ಕೋಟಿ ಜಮಾ ಆಗಿದೆ. ಜೊತೆಗೆ ಒಟ್ಟು 25.58 ಕೋಟಿ ಜನ್ ಧನ್ ಖಾತೆಗಳಲ್ಲಿ 5.98 ಖಾತೆಗಳು ಸೊನ್ನೆ ಮೊತ್ತ ಹೊಂದಿದೆ.
ಹಳೆಯ ನೋಟು ಬದಲಾವಣೆಗೆ ಡಿಸೆಂಬರ್ 30 ರ ವರೆಗೆ ಸಮಯವಿದ್ದು , ಈ ಮೊತ್ತಗಳು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ

No comments