ಕರ್ನಾಟಕದ ವೀರ ಯೋಧ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಉಗ್ರರೊಂದಿಗೆ ಕಾದಾಡಿ ಹುತಾತ್ಮ
ಜಮ್ಮು-ಕಾಶ್ಮೀರದ ನಗ್ರೋಟಾ ಉಗ್ರದಾಳಿಯಲ್ಲಿ ನಿನ್ನೆ ಹುತಾತ್ಮರಾದ 7 ಯೋಧರ ಪೈಕಿ ಬೆಂಗಳೂರಿನ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಸಹ ಒಬ್ಬರು. 31 ವರ್ಷದ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಬೆಂಗಳೂರಿನ ಯಲಹಂಕದ ಗೇಟ್ ಗಾರ್ಡನ್ ನಿವಾಸಿಯಾಗಿದ್ದಾರೆ
ದೇಶ ಸೇವೆಗಾಗಿ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಬಿಟ್ಟು ಹೋಗಿದ್ದರು ಅವರು. ಹೆತ್ತವರು, ಹೆಂಡತಿ , ಮಗಳು ಇವರೆಲ್ಲರನ್ನು ಬಿಟ್ಟು ಕಾಶ್ಮೀರದಲ್ಲಿ ಕಾವಲಿಗೆ ನಿಂತಿದ್ದರು. ಇಂಥಾ ಮಹಾನ್ ಯೋಧ ಇಂದು ನಮ್ಮೊಂದಿಗಿಲ್ಲ. ನಿನ್ನೆ ಕಾಶ್ಮೀರದಲ್ಲಿ ಉಗ್ರರೊಂದಿಗೆ ಕಾದಾಡಿ ಹುತಾತ್ಮರಾಗಿದ್ದಾರೆ
No comments