Breaking News

ಭಾರತದ ಚಿತ್ರಮಂದಿರಗಳಲ್ಲಿ ಚಲನಚಿತ್ರ ಪ್ರಾರಂಭವಾಗುವ ಮುನ್ನ ರಾಷ್ಟ್ರಗೀತೆ ಕಡ್ಡಾಯ, ಎಲ್ಲರೂ ಎದ್ದು ನಿಂತ ಗೌರವಿಸಬೇಕು - ಸುಪ್ರೀಂ ಕೋರ್ಟ್

ನವದೆಹಲಿ : ಪ್ರತಿ ಸಿನಿಮಾ ಪ್ರಾರಂಭದಲ್ಲಿ ರಾಷ್ಟ್ರ ಗೀತೆ ಮೊಳಗಿಸುವಂತೆ ಇಂದು ಸುಪ್ರೀಂ ಕೋರ್ಟ್ ಹೊಸ ಆಜ್ಞೆಯನ್ನು ಹೊರಡಿಸಿದೆ. ರಾಷ್ಟ್ರ ಗೀತೆ ಜೊತೆ ರಾಷ್ಟ್ರ ಧ್ವಜ ವನ್ನು ಸಿನಿಮಾ ಪರದೆಯಲ್ಲಿ ತೋರಿಸಬೇಕು ಹಾಗೂ ಸಿನಿಮಾ ಮಂದಿರದಲ್ಲಿರುವ ಪ್ರತಿಯೊಬ್ಬರೂ ಎದ್ದು ನಿಂತು ರಾಷ್ಟ್ರ ಗೀತೆ ಹಾಗೂ ರಾಷ್ಟ್ರ ಧ್ವಜಕ್ಕೆ ಗೌರವ ಸೂಚಿಸಬೇಕು ಎಂದು ಕೋರ್ಟ್ ಹೇಳಿದೆ.
ದೇಶದಲ್ಲಿ ರಾಷ್ಟ್ರ ಧ್ವಜ ಹಾಗೂ ರಾಷ್ಟ್ರ ಗೀತೆಯನ್ನು ದುರುಪಯೋಗ ಪಡಿಸಲಾಗುತ್ತಿರುವ ಕುರಿತು ಭೋಪಾಲ್ ನಲ್ಲಿ ಎನ್.ಜಿ.ಒ ನಡೆಸುತ್ತಿರುವ ಶಾಮ್ ನಾರಾಯಣ್ ಚೌಸ್ಕೀ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ರಾಷ್ಟ್ರ ಗೀತೆಯನ್ನು ವಾಣಿಜ್ಯಕ್ಕಾಗಿ ಅಥವಾ ನಾಟಕೀಯವಾಗಿ ಬಳಸಿಕೊಳ್ಳದಿರುವಂತೆ ಆಜ್ಞೆಯನ್ನು ಹೊರಡಿಸಿದೆ.ರಾಷ್ಟ್ರಗೀತೆ ಮೊಳಗುವಾಗ ಎದ್ದು ನಿಂತು ಗೌರವ ಸೂಚಿಸುವುದು ಪ್ರತಿಯೊಬ್ಬನ ಕರ್ತವ್ಯ, ಅದು ಅವರ ರಾಷ್ಟ್ರೀಯತೆ ಮತ್ತು ದೇಶಭಕ್ತಿಯನ್ನು ಸೂಚಿಸುತ್ತದೆ ಎಂದಿತು.
ಭಾರತದಲ್ಲಿ 1960 ರ ನಂತರದ ಪ್ರತಿಯೊಂದು ಸಿನಿಮಾದಲ್ಲೂ ರಾಷ್ಟ್ರಗೀತೆ ಮೊಳಗಿಸುವುದು ಕಡ್ಡಾಯವಾಗಿದ್ದರು ಈ ಕ್ರಮ 1990 ರ ನಂತರ ಕಣ್ಮರೆಯಾಗಿತ್ತು. 

No comments