ಬಿಜೆಪಿ ಎಂಪಿ ,mla ಗಳ ಬ್ಯಾಂಕ್ ಡಿಟೈಲ್ಸ್ ಕೇಳಿದ ಮೋದಿ
ನವ ದೆಹಲಿ : ಕಪ್ಪು ಹಣದ ವಿರುದ್ಧ ಸಮರ ಸಾರಿ ಐನೂರು ಮತ್ತು ಸಾವಿರ ರೂಪಾಯಿ ನೋಟ್ ಬ್ಯಾನ್ ಮಾಡಿದ ದೇಶದಲ್ಲಿ ವ್ಯಾಪಕ ಸದ್ದು ಮಾಡಿರುವ ಪ್ರಧಾನ ಮಂತ್ರಿ ಮೋದಿ ಅವರು ಇಂದು ಬಿಜೆಪಿಯ ಎಂಪಿ ,mla ಗಳಿಗೆ ಶಾಕ್ ನೀಡಿದ್ದಾರೆ ಬಿಜೆಪಿಯಿಂದ ಆಯ್ಕೆಯಾದ ಎಂಪಿ ,mla ಗಳ ಬ್ಯಾಂಕ್ ಖಾತೆಯಲ್ಲಿ ನವೆಂಬರ್ 8 ರಿಂದ ಡಿಸೆಂಬರ್ 31 ರ ವರೆಗೆ ನಡೆದ ಹಣದ ವಹಿವಾಟಿನ ವಿವರದ ಬಗ್ಗೆ ಬ್ಯಾಂಕ್ ಡಿಟೈಲ್ಸ್ ಅನ್ನು ಜನವರಿ ಒಂದರ ಒಳಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರಿಗೆ ಒಪ್ಪಿಸಬೇಕಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ ಪ್ರಧಾನ ಮಂತ್ರಿ ಅವರ ಈ ಹೇಳಿಕೆ ಬಿಜೆಪಿಯ ಕೆಲ ಎಂಪಿ ,mla ಗಳಿಗೆ ಶಾಕ್ ನೀಡಿದಂತಾಗಿದೆ ಎಂದು ತಿಳಿದು ಬಂದಿದೆ
No comments