Breaking News

ಮೋದಿ ನೋಟು ಬ್ಯಾನ್ ಬ್ರಹ್ಮಾಸ್ತ್ರಕ್ಕೆ ಶರಣಾದ 564 ಮಾವೋವಾದಿಗಳು.

ನವದೆಹಲಿ : ಕೇಂದ್ರ ಸರ್ಕಾರ 500 ಹಾಗೂ 1000 ರೂಪಾಯಿಗಳ ಹಳೆಯ ನೋಟು ರದ್ದತಿ ಬಿಸಿ ಕಾಳಧನಿಕರಷ್ಟೇ ಅಲ್ಲದೆ ಮಾವೋವಾದಿಗಳಿಗೂ ಮುಟ್ಟಿದೆ. ನೋಟು ರದ್ದತಿ ಕ್ರಮ ಕೈಗೊಂಡ ನಂತರದಿಂದ ಇದುವರೆಗೆ 564 ಮಾವೋವಾದಿಗಳು ಮತ್ತು ಅವರ ಜೊತೆ ನಿಕಟ ಸಂಪರ್ಕದಲ್ಲಿದ್ದವರು ಶಸ್ತ್ರಾಸ್ತ್ರ ತ್ಯಜಿಸಿ ಸಂಬಂಧಪಟ್ಟ ಅಧಿಕಾರಿಗಳ ಮುಂದೆ ಶರಣಾಗತರಾಗಿದ್ದಾರೆ.
ಇದೊಂದು ಉತ್ತಮ ಬೆಳವಣಿಗೆಯಾಗಿದ್ದು ನಕ್ಸಲ್ ಹಾವಳಿ ಹೆಚ್ಚಿರುವ ಒಡಿಶಾ, ಛತ್ತೀಸಗಢ, ಆಂದ್ರಪ್ರದೇಶ, ಬಿಹಾರ, ಮಧ್ಯಪ್ರದೇಶ, ಕರ್ನಾಟಕ ಸೇರಿ ವಿವಿಧ ರಾಜ್ಯಗಳಿಂದ ನವೆಂಬರ್ 18ರಿಂದ ಈವರೆಗೆ ಹತ್ತು ದಿನದ ಅವಧಿಯಲ್ಲಿಯೇ 469 ಮಾವೋವಾದಿಗಳು ಅವರ ಬೆಂಬಲಿಗರು ಶರಣಾಗಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯದ ಅಂಕಿ ಅಂಶ ನೀಡಿದೆ. ಅತೀ ಹೆಚ್ಚು ಶರಣಾಗತಿ (ಶೇಕಡಾ70) ಒಡಿಶಾದ ಮಾಲ್ಕನ್ ಗಿರಿ ಜಿಲ್ಲೆಯಿಂದ ಆಗಿದೆ.
ಕೇಂದ್ರ ಸರ್ಕಾರವು 500 ಮತ್ತು 1,000 ರೂ.ಗಳ ನೋಟುಗಳನ್ನು ರದ್ದುಗೊಳಿಸಿದ ನಂತರ ನಕ್ಸಲೀಯರು ಮತ್ತು ಮಾವೋವಾದಿ ಉಗ್ರರ ಅಸ್ತಿತ್ವವೇ ಬುಡಮೇಲಾಗಿದ್ದು, ಬದುಕುಳಿಯಲು ಹೆಣಗುತ್ತಿದ್ದಾರೆ ಎಂದು ಕೆಲದಿನಗಳ ಹಿಂದೆಯಷ್ಟೇ ಗೃಹಸಚಿವ ರಾಜನಾಥ್ ಸಿಂಗ್ ಅವರು ಹೈದರಾಬಾದ್‍ನಲ್ಲಿ ನಡೆದ ಪೊಲೀಸ್ ಮಹಾನಿರ್ದೇಶಕರ ಸಮಾವೇಶದಲ್ಲಿ ಹೇಳಿದ್ದರು.

No comments