ಈ ಮಾಡೆಲ್ ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ ನಂತರದ ಬದಲಾವಣೆ ನೋಡಿದ್ರೆ ದಂಗಾಗ್ತೀರ.
ಸ್ವೀಡಿಶ್ ರೂಪದರ್ಶಿ ಫಿಕ್ಸೀ ಫೋಕ್ಸ್ ತಾನು ಬಾರ್ಬೀ ಡಾಲ್ ತರ ಕಾಣಬೇಕೆಂಬ ಬಯಕೆಯಿಂದ ತನ್ನ ದೇಹಕ್ಕೆ 100ಕ್ಕೂ ಹೆಚ್ಚು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾಳೆ.
26 ವರ್ಷದ ಈ ಮಾಡಲ್ ಬಾರ್ಬೀ ತರ ಕಾಣಬೇಕೆಂಬ ಬಯಕೆಯಿಂದ ಮಾಡಿಸಿರುವ ಪ್ಲಾಸ್ಟಿಕ್ ಸರ್ಜರಿಯಲ್ಲಿ ಕಣ್ಣಿನ ಬಣ್ಣ ಬದಲಾಯಿಸಲಾಗಿದೆ, ತುಟಿಗಳಿಗೆ ಸರ್ಜರಿ ಮಾಡಲಾಗಿದೆ ಜೊತೆಗೆ ಜಗತ್ತಿನ ಅತೀ ಸಣ್ಣ ಸೊಂಟ ಹೊಂದಲು ತನ್ನ ಸೊಂಟ ಭಾಗದಲ್ಲಿನ ಆರು ಪಕ್ಕೆಲುಬುಗಳನ್ನು ತೆಗೆಸಿದ್ದಾಳೆ.
"ನನ್ನ ಹಿಂದಿನ ರೂಪದಲ್ಲಿಯೂ ನಾನು ಸಂತೋಷವಾಗಿದ್ದೆ, ಆದರೆ ನನಗೆ ಹೊಸತರ ಕಾಣಬೇಕೆಂಬ ಬಯಕೆಯಿಂದ ನನ್ನ ದೇಹದಲ್ಲಿ ಮಾರ್ಪಾಡು ಮಾಡಿದ್ದೇನೆ. ನನಗೆ ಜಗತ್ತಿನ ಅತೀ ಸಣ್ಣ ಸೊಂಟ ಹೊಂದಿರುವುದಕ್ಕಾಗಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡೋ ಬಯಕೆಯಿದೆ".ಇಷ್ಟೇ ಅಲ್ಲದೆ ಮುಂದಿನ ವರ್ಷ ಇನ್ನೂ ಹತ್ತು ಪ್ಲಾಸ್ಟಿಕ್ ಸರ್ಜರಿ ಮಾಡಿಸಬೇಕೆಂದಿದ್ದೇನೆ ಎಂದು ಫಿಕ್ಸಿ ಹೇಳಿಕೊಂಡಿದ್ದಾಳೆ
ಆದರೆ ಹೆತ್ತವರು ಈಕೆಯ ಬದಲಾವಣೆ ಕಂಡು ಚಿಂತಿತರಾಗಿದ್ದಾರೆ.ಈಕೆ ಹೀಗೆ ದೇಹಕ್ಕೆ ಕತ್ತರಿ ಹಾಕಿಸಿ ದೇಹಕ್ಕೆ ತೊಂದರೆ ಉಂಟು ಮಾಡದಿರಲಿ ಎಂಬದು ಅವರ ಬಯಕೆಯಾಗಿದೆ.
ಮಾಡೆಲ್ ಫಿಕ್ಸಿ ಫೋಕ್ಸ್ ವೀಡಿಯೋಗಳು :
ಸೊಂಟವನ್ನು ಕಿರಿದಾಗಿಸಲು 6 ಪಕ್ಕೆಲುಬು ತೆಗೆಸಿರುವ ಮಾಡಲ್ ಫಿಕ್ಸಿ ಫೋಕ್ಸ್.
ಪ್ಲಾಸ್ಟಿಕ್ ಸರ್ಜರಿ ನಂತರ ಫಿಕ್ಸೀ ಫಾಕ್ಸ್ ತನ್ನ ಮನೆಯವರೊಂದಿಗೆ.
ಮಾಡೆಲ್ ಸರ್ಜರಿ ಮಾಡಿಸುವ ಮೊದಲು ಮತ್ತು ನಂತರದ ಬದಲಾವಣೆಗಳು.
No comments