Breaking News

ರೈಲ್ವೆ ನಿಲ್ದಾಣಕ್ಕೆ ರಾಮ ಮಂದಿರ ಹೆಸರಿಟ್ಟ ಮಹಾರಾಷ್ಟ್ರ ಸರ್ಕಾರ


ಫೋಟೋ ಕೃಪೆ - ಮಿಡ್ ಡೇ
ಮುಂಬೈ : ಗೋರೆಗಾಂವ್ ಹಾಗೂ ಜೋಗೇಶ್ವರಿ ನಡುವೆ ಇರುವ ಹೊಸ ರೈಲ್ವೆ ನಿಲ್ದಾಣಕ್ಕೆ  'ರಾಮ ಮಂದಿರ' ಎಂದು ಹೆಸರಿಡಲು ಮಹಾರಾಷ್ಟ್ರ ಮುಖ್ಯಮಂತ್ರಿ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಬಿಜೆಪಿ ಹಾಗೂ ಶಿವಸೇನೆ ಕಾರ್ಯಕರ್ತರು ಹೊಸ ರೈಲ್ವೇ ನಿಲ್ದಾಣಕ್ಕೆ 'ರಾಮ ಮಂದಿರ' ಎಂದು ಹೆಸರಿಡಬೇಕೆಂದು ಬೇಡಿಕೆ ಇಡುತ್ತಿದ್ದರು ಈಗ ಬೇಡಿಕೆಗೆ ಮಣಿದಿರುವ ಮಹಾರಾಷ್ಟ್ರ ಸರ್ಕಾರ ರೈಲ್ವೇ ನಿಲ್ದಾಣಕ್ಕೆ 'ರಾಮ ಮಂದಿರ' ಎಂದು ಹೆಸರಿಸಲು ಸೂಚನೆ ಹೊರಡಿಸಿದೆ.
ಗೋರೆಗಾಂವ್ ಹಾಗೂ ಜೋಗೇಶ್ವರಿ ನಡುವೆ ನಿರ್ಮಾಣವಾಗಿ ಉದ್ಘಾಟನೆಗೆ ಸಜ್ಜಾಗಿರುವ  ಹೊಸ ರೈಲ್ವೆ ನಿಲ್ದಾಣಕ್ಕೆ ಒಶಿವಾರ್ ರೈಲ್ವೆ ನಿಲ್ದಾಣವೆಂದು ಕರೆಯಲಾಗುತ್ತಿತ್ತು . ರಾಮ ಮಂದಿರ ಚೌಕ್ ಮತ್ತು  ರಾಮ ಮಂದಿರ, ನಿಲ್ದಾಣಕ್ಕೆ ಹತ್ತಿರವಿರುವುದರಿಂದ ಬಿಜೆಪಿ ಹಾಗೂ ಶಿವಸೇನೆ ಈ ಅಭಿಪ್ರಾಯ ವ್ಯಕ್ತಪಡಿಸಿತ್ತು. ಭಾನುವಾರ ಈ ಹೊಸ ರೈಲ್ವೆ ನಿಲ್ದಾಣ ಉದ್ಘಾಟನೆಗೊಳ್ಳಲಿದೆ.

No comments