8 ವರ್ಷ ಕಳೆದರೂ ಆ ಕರಾಳ ಘಟನೆ ಈಗಲೂ ಬೆಚ್ಚಿ ಬೀಳಿಸುತ್ತದೆ
ಇಂದು ನವೆಂಬರ್ 26ನೇ ತಾರೀಕು. ೮ ವರ್ಷಗಳ ಹಿಂದೆ ಇದೇ ತಾರೀಖಿನಂದು ಮುಂಬೈನಲ್ಲಿ ಕರಾಳ ಘಟನೆಯೊಂದು ಘಟಿಸಿಬಿಟ್ಟಿತ್ತು. 2008ರ ನವೆಂಬರ್ 26ರಂದು ಪಾಕಿಸ್ತಾನದ ಹತ್ತು ಉಗ್ರರು ಭಾರತದೊಳಗೆ ಸಮುದ್ರದ ಮುಖಾಂತರ ನುಸುಳಿ 166 ಜನರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಮುಂಬೈನ ತಾಜ್ ಹೊಟೆಲ್ ನುಗ್ಗಿದ ಹಂತಕರು ಗುಂಡಿನ ಮಳೆಗರೆದಿದ್ದರು.
ಮುಂಬೈನ ಪ್ರತಿಷ್ಠಿತ ತಾಜ್ ಮಹಲ್ ಪ್ಯಾಲೇಸ್ ಹೋಟೆಲಿನಲ್ಲಿದ್ದ ಜನರನ್ನು ರಕ್ಷಣೆ ಮಾಡಲು, ಸಿಂಹಸ್ವಪ್ನವಾಗಿದ್ದ ಎನ್‌ಕೌಂಟರ‍್ ಸ್ಪೆಷಲಿಸ್ಟ್ ವಿಜಯ್ ಸಲಾಸ್ಕರ್, ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ, ಅಶೋಕ್ ಕಾಮ್ಟೆ, ತುಕಾರಾಂ ಒಂಬಳೆ, ಗಜೇಂದರ್ ಸಿಂಗ್ ಹಾಗೂ ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್ ಕಮಾಂಡೋ ಆಗಿದ್ದ ಸಂದೀಪ್ ಉನ್ನಿಕೃಷ್ಣನ್ ಅವರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಉಗ್ರರನ್ನು ಸದೆಬಡಿದರು.
ವೀರ ಯೋಧರು ತಮ್ಮ ಪ್ರಾಣವನ್ನು ದೇಶದ ಜನರಿಗಾಗಿ ಅರ್ಪಣೆ ಮಾಡಿ ಇಂದಿಗೆ ೮ ವರ್ಷಗಳು ಕಳೆದಿವೆ. ವೀರ ಸೇನಾನಿಗಳ ನೆನಪು ನಮ್ಮೆಲ್ಲರನ್ನು ಕಾಡುತ್ತಿರುವಾಗ ಉಗ್ರರ ಕರಿ ಛಾಯೆಯ ಭಯಾನಕ ದಾಳಿಯೂ ಕೂಡ ನಮ್ಮ ಕಣ್ಮುಂದೆ ಬಂದು ಹೋಗುತ್ತದೆ.
No comments