Breaking News

ಸಿದ್ದರಾಮಯ್ಯ ಓರ್ವ ಡೋಂಗಿ ಸಮಾಜವಾದಿ, ಕರ್ನಾಟಕದ ನಂ1 ಸುಳ್ಳುಗಾರ ರಾಜಕಾರಣಿ : ಶ್ರೀನಿವಾಸ್ ಪ್ರಸಾದ್



ಮೈಸೂರ್ : ದಲಿತ ನಾಯಕರೆಂದು ಗುರುತಿಸಿಕೊಂಡು ಇತ್ತೀಚೆಗಷ್ಟೇ ಕಾಂಗ್ರೆಸ್ ನಿಂದ ಹೊರ ಬಂದ ಶ್ರೀನಿವಾಸ್ ಪ್ರಸಾದ್ ಚಾಮರಾಜನಗರದಲ್ಲಿ ಸ್ವಾಭಿಮಾನ ಸಮಾವೇಶಕ್ಕೆ ಚಾಲನೆ ನೀಡಿ ಸಿಎಂ ವಿರುದ್ಧ ಏಕ ವಚನದಲ್ಲಿ ಗುಡುಗಿದರು ,

 ಸ್ವಾಭಿಮಾನ ಸಮಾವೇಶದಲ್ಲಿ ಮಾತನಾಡಿದ ಶ್ರೀನಿವಾಸ್ ಪ್ರಸಾದ್ ದಲಿತರನ್ನು ಸಿದ್ದರಾಮಯ್ಯ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಉಪಯೋಗಿಸುತ್ತಿದ್ದಾರೆ ,ದಲಿತ ರಾಜಕಾರಣವನ್ನು ಧ್ವಂಸ ಮಾಡಲು ಸಿದ್ದರಾಮಯ್ಯ ಹುನ್ನಾರ ಮಾಡುತ್ತಿದ್ದಾನೆ,ಸಿದ್ದರಾಮಯ್ಯ ಓರ್ವ ಡೋಂಗಿ ಸಮಾಜವಾದಿ, ಕರ್ನಾಟಕದ ನಂ1 ಸುಳ್ಳುಗಾರ ರಾಜಕಾರಣಿ, ನಾನು ಸಮುದ್ರದಲ್ಲಿ ಈಜಿ ಬಂದವನು, ನೀನು ಬಾವಿಯಲ್ಲಿ ವಟಗುಟ್ಟುವ ಕಪ್ಪೆ ಮತ್ತು  ರಾಜ್ಯದ ಮುಖ್ಯ ಮಂತ್ರಿಯಾಗಿ ಇವರು ನಕಲಿ ಮುಖವಾಡ ಹಾಕಿ ಗಿರಕಿ ಹೊಡೆಯುತ್ತಿದ್ದಾರೆ  ಇವನ ಇನ್ನೊಂದು ಮುಖ ಜನರಿಗೆ ಗೊತ್ತಿಲ್ಲ, ಎಂದು ಶ್ರೀನಿವಾಸ್ ಪ್ರಸಾದ್ ಗುಡುಗಿದರು 

No comments