Breaking News

ಎತ್ತಿನ ಹೊಳೆ ಯೋಜನೆ ಹಗರಣ ಕಾಂಗ್ರೆಸ್ 3 ಸಚಿವರು ಹಗರಣದಲ್ಲಿ ಭಾಗಿಯಾಗಿರುವ ಶಂಕೆ : ಜನಾರ್ಧನ ಪೂಜಾರಿ


ಮಂಗಳೂರು : ಕರಾವಳಿಯ ಜನರನ್ನು ಆತಂಕಕ್ಕೆ ದೂಡಿದ  ಎತ್ತಿನಹೊಳೆ ಯೋಜನೆಯಲ್ಲಿ  ಬಹು ದೊಡ್ಡ ಹಗರಣ ನಡೆದಿದೆ ಎಂಬ ಗಂಭೀರ ಆರೋಪವನ್ನು ಕಾಂಗ್ರೆಸ್ ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ಅವರು ಮಾಡಿದ್ದಾರೆ.
ಈ ಯೋಜನೆಯ ಬಹುಕೋಟಿ ಟೆಂಡರ್ ಅನ್ನು ಅಂದ್ರ ಮೂಲದ  ಭ್ರಷ್ಟ ಸಂಸ್ಥೆಗೆ ನೀಡಲಾಗಿದ್ದು ಮತ್ತು ಕಾಂಗ್ರೆಸ್ನ  3 ಸಚಿವರಿಗೆ ೫೦ ಕೋಟಿ ರೂಪಾಯಿಯನ್ನು ಲಂಚ ನೀಡಲಾಗಿದೆ ಮತ್ತು 16 ಕಡೆ ಗುತ್ತಿಗೆ ಕಚೇರಿಗಳಿಗೆ ಐಟಿ ದಾಳಿ ನಡೆದಿದೆ. ಎತ್ತಿನ ಹೊಳೆ ಯೋಜನೆಯಲ್ಲಿ ಹಣ ನುಂಗಿದ ಸಚಿವರನ್ನು ಕೂಡಲೇ ಸಂಪುಟದಿಂದ ವಜಾ ಮಾಡಿ ಸಿಎಂ ಪಕ್ಷದ ಮರ್ಯಾದೆಯನ್ನು ರಕ್ಷಣೆ ಮಾಡಬೇಕು. ಇಲ್ಲದಿದ್ದರೆ ಜನ ನಿಮ್ಮನ್ನು ಕ್ಷಮಿಸಲಾರರು ಎಂದು ಸಿಎಂಗೆ ಮಂಗಳೂರಿನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ 

No comments