Breaking News

ಯುವರಾಜ್ ಸಿಂಗ್ ಮದುವೆ ಇಂದು.

ಮುಂಬೈ : ಕ್ರಿಕೆಟರ್ ಯುವರಾಜ್ ಸಿಂಗ್ ಮದುವೆ ರೂಪದರ್ಶಿ ಹಜೆಲ್ ಕೀಚ್ ಜೊತೆ ಇಂದು ಸಿಖ್ ಸಂಪ್ರದಾಯದಂತೆ ಗುರುದ್ವಾರದಲ್ಲಿ ನೆರವೇರಲಿದೆ.ಮದುವೆಯ ಪ್ರಯುಕ್ತ ನಿನ್ನೆ ನಡೆದ ಸಂಗೀತ ಕಾರ್ಯಕ್ರಮದ ಭಾವಚಿತ್ರಗಳನ್ನು ಯುವರಾಜ್ ಸಿಂಗ್ ಸಾಮಾಜಿಕ ಜಾಲತಾಣ ಇನ್-ಸ್ಟಾಗ್ರಂ ಗೆ ಹಾಕಿದ್ದು ಎಲ್ಲೆಡೆಯಿಂದ ಯುವರಾಜ್'ಗೆ ಅಭಿಮಾನಿಗಳ ಶುಭ ಹಾರೈಕೆಗಳು ಬರುತ್ತಿವೆ.
ಗುರುದ್ವಾರದಲ್ಲಿ ಸಿಖ್ ಸಂಪ್ರದಾಯದಂತೆ ಮದುವೆ ನೆರವೇರಿದ ನಂತರ ಗೋವಾದಲ್ಲಿ ಬಿಹಾರಿ ಹಿಂದೂ ಸಂಪ್ರದಾಯದಂತೆ ಮತ್ತೊಮ್ಮೆ ಮದುವೆ ನೆರವೇರಲಿದೆ. ಹಜೆಲ್ ತಾಯಿ ಮೌರಿಶಿಯನ್ ಮೂಲದ ಬಿಹಾರಿ ಹಿಂದೂವಾಗಿದ್ದು ತಂದೆ ಬ್ರಿಟಿಷ್ ಪ್ರಜೆಯಾಗಿದ್ದಾರೆ.
ಎರಡೂ ಸಂಪ್ರದಾಯದಂತೆ ಮದುವೆ ನೆರವೇರಿದ ನಂತರ ದೆಹಲಿಯಲ್ಲಿ ಆರಕ್ಷತೆ ಕಾರ್ಯಕ್ರಮ ಇಟ್ಟುಕೊಳ್ಳಲಾಗಿದೆ.ಆರಕ್ಷತೆಗೆ 800 ಮಂದಿ ಅತಿಥಿಗಳು ಭಾಗವಹಿಸಿ ಹೊಸ ಜೋಡಿಯನ್ನು ಹಾರೈಸುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.

No comments