Breaking News

ಬ್ಯಾಂಕಿನಿಂದ ಪಡೆದ ಗಂಟೆಯ ಒಳಗೆ ಚೂರು ಚೂರಾದ ಹೊಸ 2000 ನೋಟಿನ ಅಂಚುಗಳು.

Image courtesy - The Hindu
ಕೇರಳ : ಕೇರಳದ ತಳಿಪರಂಬ ಎಂಬಲ್ಲಿ ವ್ಯಕ್ತಿಯೊಬ್ಬರು ಫೆಡರಲ್ ಬ್ಯಾಂಕ್ ಶಾಖೆಯಿಂದ ಪಡೆದ 2000 ಮುಖಬೆಲೆಯ ಹೊಸನೋಟು ನಗದೀಕರಿಸಿದ ಒಂದು ಗಂಟೆಯ ಒಳಗೆ ಚೂರು ಚೂರುಗಳಾಗಿ ಉದುರಿದ ಘಟನೆ ನಡೆದಿದೆ. 
ತಳಿಪರಂಬ ಪಟ್ಟಣದ ಮುಕ್ಕೋಲ ನಿವಾಸಿಯಾದ ಶರೀಫ ಎಂಬ ಮಹಿಳೆ ಡಿಸೆಂಬರ್-13 ರಂದು ತಳಿಪರಂಬ ಫೆಡರಲ್ ಬ್ಯಾಂಕ್ ಶಾಖೆಯಿಂದ ಪಡೆದ 456828 ಸೀರಿಯಲ್ ಸಂಖ್ಯೆಯ ಹೊಸ 2000 ಬೆಲೆಯ ನೊಟಿನ ಅಂಚುಗಳು ಬ್ಯಾಂಕಿನಿಂದ ಪಡೆದ ಒಂದು ಗಂಟೆಯ ಒಳಗೆ ಈ ರೀತಿ ಚೂರು ಚೂರಾಗುವ ಮೂಲಕ ಹಾನಿಗೊಳಗಾಗಿದೆ. 
ಶರೀಫಾರ ಮಗನ ಪ್ರಕಾರ "ನನ್ನ ತಾಯಿ ಫೆಡರಲ್ ಬ್ಯಾಂಕ್ ಶಾಖೆಯಲ್ಲಿ ಗಂಟೆಗಳ ಕಾಲ ಸಾಲಲ್ಲಿ ನಿಂತು ಹಣವನ್ನು ನಗದೀಕರಿಸಿ ಬಂದಿದ್ದರು, ಇದರಲ್ಲಿ 2000 ಮುಖಬೆಲೆಯ ಐದು ನೋಟುಗಳನ್ನು ಬ್ಯಾಂಕ್ ಅಧಿಕಾರಿಗಳು ತಾಯಿಗೆ ನೀಡಿದ್ದಾರೆ. ಎಲ್ಲಾ ಐದು ನೋಟುಗಳ ಗುಣಮಟ್ಟ ಸರಿ ಇರಲಿಲ್ಲ, ಹೇಗಾದರು ಮಾಡಿ ನಾಲ್ಕು ನೋಟುಗಳನ್ನು ಚಲಾವಣೆ ಮಾಡಿದ್ದೇವೆ ಆದರೆ ಈ ಒಂದು ನೋಟು ತುಂಬಾ ಹಾಳಾಗಿದೆ ಹಾಗಾಗಿ ಚಲಾವಣೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳನ್ನು ಪ್ರಶ್ನಿಸಿದರೆ ಅವರು ನೋಟನ್ನು ಹಿಂದಕ್ಕೆ ಪಡೆಯಲು ಸಿದ್ಧರಿಲ್ಲ" ಎಂದು ಹೇಳಿದ್ದಾರೆ.

No comments