Breaking News

ಹೆಣ್ಣಾಗಿ ಹುಟ್ಟಿದ್ದಕ್ಕೆ 14ವರ್ಷದ ಬಾಲಕಿಗೆ ಲಾಯರ್ ತಂದೆಯಿಂದ ದಿನಂಪ್ರತಿ ಥಳಿತ.

ನವದೆಹಲಿ : "ನಮ್ಮ ಪ್ರಧಾನಿ 'ಬೇಟಿ ಬಚಾವೋ,  ಬೇಟಿ ಪಢಾವೋ'  ಎಂದು ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ ,ಆದರೆ ನನ್ನ ತಂದೆ ನಾನು ಹೆಣ್ಣಾಗಿ ಹುಟ್ಟಿದ್ದಕ್ಕೆ ಪ್ರತಿದಿನ ನನಗೆ ಮನಬಂದಂತೆ ಥಳಿಸುತ್ತಾರೆ" ಇದು 14 ವರ್ಷದ ಬಾಲಕಿಯೊಬ್ಬಳ ನೋವಿನ ಮಾತು.
ದೆಹಲಿಯ ವಸಂತ ಕುಂಜ್ ನಿವಾಸಿ, ಹೈಕೋರ್ಟಿನಲ್ಲಿ ಲಾಯರ್ ಆಗಿರುವ ವ್ಯಕ್ತಿಯೊಬ್ಬರು ತನ್ನ ಹೆಂಡತಿಯನ್ನು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕೆ ಕಳೆದ 14ವರ್ಷಗಳಿಂದ ದಿನಂಪ್ರತಿ ಹೊಡೆಯುತ್ತಿರುವ ಅವಮಾನಕರ ಘಟನೆ ಬೆಳಕಿಗೆ ಬಂದಿದೆ.
ಘಟನೆ ಬಗ್ಗೆ ಮಾತನಾಡಿದ ಸಂತ್ರಸ್ತ ಮಹಿಳೆ " ನಾನು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕಾಗಿ ನನ್ನ ಗಂಡ ಹಾಗೂ ಅತ್ತೆ ತುಂಬಾ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ, ನನ್ನ 14ವರ್ಷದ ಮಗಳಿಗೆ ಪ್ರತಿದಿನ ಇಬ್ಬರೂ ಮನಬಂದಂತೆ ಥಳಿಸುತ್ತಾರೆ. ಅವರಿಗೆ ಗಂಡು ಮಗು ಬೇಕಾಗಿತ್ತು ಆದರೆ ನನ್ನ ಎರಡನೇ ಮಗು (1.5ವರ್ಷ) ಕೂಡ ಹೆಣ್ಣಾಗಿ ಹುಟ್ಟಿದ ಕಾರಣ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ, ನಮ್ಮನ್ನು ಮನೆಯಿಂದ ಹೊರದಬ್ಬಲಾಗಿದೆ. ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಕ್ಕಾಗಿ ನಮ್ಮನ್ನು ಶಾಪಗ್ರಸ್ತರಂತೆ ನಡೆಸಿಕೊಳ್ಳುತ್ತಿದ್ದಾರೆ" ಎಂದು ಹೇಳಿದ್ದಾರೆ
ಈ ಬಗ್ಗೆ ದೆಹಲಿಯ ಮಹಿಳಾ ಆಯೋಗ ಹಾಗೂ ದೆಹಲಿ ಪೋಲೀಸರಲ್ಲಿ ಕೇಸು ದಾಖಲಾಗಿದೆ, ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.

No comments