ಉಗ್ರರಿಂದ ಜಮ್ಮು-ಕಾಶ್ಮೀರದಲ್ಲಿ ಬ್ಯಾಂಕ್ ದರೋಡೆ, ಪರಾರಿಯಾಗಲು ಸ್ಥಳೀಯರ ಸಾಥ್.
ಜಮ್ಮು ಕಾಶ್ಮೀರ : ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಗುರುವಾರ ಉಗ್ರರು ಬ್ಯಾಂಕ್ ಒಂದಕ್ಕೆ ದಾಳಿ ಮಾಡಿ 11ಲಕ್ಷ ಹಣ ದೋಚಿಕೊಂಡು ಪರಾರಿಯಾಗಿದ್ದಾರೆ. ಉಗ್ರರು ಪುಲ್ವಾಮ ಜಿಲ್ಲೆಯ ರಂಟೀಪುರದ 'ಜಮ್ಮು ಅಂಡ್ ಕಾಶ್ಮೀರ' ಶಾಖೆಗೆ ದಾಳಿ ಮಾಡಿದ್ದಾರೆ.
ಉಗ್ರರು ಬ್ಯಾಂಕಿಗೆ ದಾಳಿ ಮಾಡಿ 11ಲಕ್ಷ ದೋಚಿ ಪರಾರಿಯಾದ ಸುದ್ದಿ ತಿಳಿದ ತಕ್ಷಣ ಅಲ್ಲಿಗೆ ಬಂದ ಪೋಲೀಸರು ಉಗ್ರರ ವಿರುದ್ದ ಕಾರ್ಯಾಚರಣೆ ನಡೆಸುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಪೋಲೀಸರ ಮೇಲೆ ಕಲ್ಲುತೂರಾಟ ನಡೆಸಿ ಕಾರ್ಯಾಚರಣೆಗೆ ಅಡ್ಡಿಪಡಿಸಿದರು.
ಕೇಂದ್ರ ಸರ್ಕಾರ ನವೆಂಬರ್-8 ರಂದು 500 ಹಾಗೂ 1000 ಮುಖಬೆಲೆಯ ನೋಟುಗಳ ನಿಷೇಧ ಮಾಡಿದ ನಂತರ ಇದು ಜಮ್ಮುಕಾಶ್ಮೀರದಲ್ಲಿ ಮೂರನೇ ಬ್ಯಾಂಕ್ ದರೋಡೆ ಪ್ರಕರಣವಾಗಿದೆ.
No comments