Breaking News

ಈ ಉದ್ಯಮಿ ಮಗಳ ಮದುವೆಗೆ ಕೋಟಿ ಖರ್ಚು ಮಾಡಿದ್ದರು, ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ. ಯಾಕೆ.?

ಮಹಾರಾಷ್ಟ್ರ : ನಾವು ಆಗಾಗ ರಾಜಕಾರಣಿಗಳು, ಉದ್ಯಮಿಗಳು ತಮ್ಮ ಮಕ್ಕಳ ಮದುವೆಗೆ ಕೋಟಿ ಕೋಟಿ ಖರ್ಚು ಮಾಡಿದ ಸುದ್ದಿ ಪೇಪರ್'ನಲ್ಲಿ, ಸುದ್ದಿ ವಾಹಿನಿಗಳಲ್ಲಿ ನೋಡುತ್ತಾ ಇರ್ತೇವೆ, ಕೇಳ್ತಾ ಇರ್ತೇವೆ. ಇಂತಹ ಸುದ್ದಿಗಳನ್ನು ಹೊಗಳುವವರಿಗಿಂತ ತೆಗಳುವವರೆ ಜಾಸ್ತಿ. ಆದರೆ ಮಹಾರಾಷ್ಟ್ರದ ಔರಂಗಬಾದ್'ನ ಉದ್ಯಮಿಯೊಬ್ಬರು ತನ್ನ ಮಗಳ ಮದುವೆಯಲ್ಲಿ ಕೋಟಿ ಹಣ ಖರ್ಚುಮಾಡಿದ್ದರೂ ಎಲ್ಲಾ ಕಡೆಯಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಮಹಾರಾಷ್ಟ್ರದ ಔರಂಗಬಾದಿನ ಉದ್ಯಮಿ ಮನೋಜ್ ಮುನೋತ್ ತನ್ನ ಮಗಳ ಮದುವೆಯ ಕಾರ್ಯಕ್ರಮಕ್ಕೆ ದುಂದುವೆಚ್ಚ ಮಾಡುವ ಬದಲು ಮಗಳ ಮದುವೆಗಾಗಿ ಇಟ್ಟಿದ್ದ ಹಣದಲ್ಲಿ ಮನೆಯಿಲ್ಲದ ಬಡವರಿಗೆ 90 ಮನೆ ಕಟ್ಟಿಸಿಕೊಟ್ಟು ಬಡವರಿಗೆ ಆಸರೆಯಾಗಿದ್ದಾರೆ.
ಉದ್ಯಮಿ ಮನೋಜ್ ಮೊದಲು ತಮ್ಮ ಮಗಳ ಮದುವೆಯನ್ನು ವಿಜ್ರಂಭಣೆಯಿಂದ ಆಚರಿಸಬೇಕು ಎಂದು ಆಸೆಪಟ್ಟಿದ್ದರು ಇದಕ್ಕೆ ಎಲ್ಲಾ ತಯಾರಿ ನಡೆಸಿದ್ದರು ಆದರೆ ನಂತರ ಗೆಳೆಯನೊಬ್ಬನ ಸಲಹೆಯಂತೆ ಮನಸ್ಸು ಬದಲಾಯಿಸಿ ಅದೇ ಹಣದಲ್ಲಿ ಬಡವರಿಗೆ ಮನೆ ಕಟ್ಟಿಸಿಕೊಟ್ಟು ಮಗಳ ಮದುವೆಯನ್ನು ತುಂಬಾ ಸರಳವಾಗಿ ನೆರವೇರಿಸಿದರು.
ಉದ್ಯಮಿ ಬಡವರಿಗೆ ಕಟ್ಟಿಸಿರುವ ಮನೆಯಲ್ಲಿ ಒಂದು ಮಲಗುವ ಕೋಣೆ ಮತ್ತು ಒಂದು ಅಡುಗೆಕೋಣೆ ಇದೆ, ಎರಡು ಎಕರೆ ಜಮೀನಿನಲ್ಲಿ 1.5ಕೋಟಿ ಖರ್ಚು ಮಾಡಿ ಒಟ್ಟು 90 ಮನೆ ಕಟ್ಟಿಸಲಾಗಿದೆ. ಎರಡು ತಿಂಗಳಿನಲ್ಲಿ ಮನೆ ಕಟ್ಟಿ ಬಡವರಿಗೆ ಹಸ್ತಾಂತರಿಸಲಾಗಿದೆ.
ಇದರ ಬಗ್ಗೆ ಪ್ರತಿಕ್ರಿಯಿಸಿದ ಉದ್ಯಮಿ ಮನೋಜ್ ಮುನೋತ್ "ನನ್ನ ಪ್ರಕಾರ ಇದೊಂದು ಉತ್ತಮ ಅಧ್ಯಾಯ, ಇದನ್ನು ಇತರರು ಅನಿಸುತ್ತಾರೆ ಎಂದು ನನಗೆ ನಂಬಿಕೆಯಿದೆ. ಸಮಾಜಕ್ಕಾಗಿ ಏನಾದರು ನೀಡಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ, ನಾವು ಅದನ್ನು ಪಾಲನೆ ಮಾಡುವ ಪ್ರಯತ್ನ ಮಾಡಿದ್ದೇವೆ" ಎಂದು ಹೇಳಿದ್ದಾರೆ.
ಉದ್ಯಮಿಯ ಮಗಳು ಕೂಡ ತಂದೆಯನ್ನು  ಬೆಂಬಲಿಸುತ್ತಾ "ನನ್ನ ತಂದೆ ನಿರ್ಧಾರದಿಂದ ನನಗೆ ತುಂಬಾ ಸಂತೋಷವಾಗಿದೆ, ಇದು ನನ್ನ ಮದುವೆಗೆ ನನ್ನ ತಂದೆ ನೀಡಿದ ಉತ್ತಮವಾದ ಉಡುಗೊರೆ" ಎಂದಿದ್ದಾಳೆ.

No comments