Breaking News

ಕ್ಯಾತಮಾರನಹಳ್ಳಿ ರಾಜು ಹತ್ಯೆ ಪ್ರಕರಣ ಆರೋಪಿಗಳು ನ್ಯಾಯಾಲಯಕ್ಕೆ ಹಾಜರು


ಮೈಸೂರು,:ಆರ್‌ಎಸ್‌ಎಸ್‌ ಮುಖಂಡ ಕ್ಯಾತಮಾರನಹಳ್ಳಿ ರಾಜು ಹತ್ಯೆ ಪ್ರಕರಣಕ್ಕೆ  ಸಂಬಂಧಿಸಿದಂತೆ 7 ಮಂದಿ ಪ್ರಮುಖ ಆರೋಪಿಗಳನ್ನು ಇಂದು ಬೆಳಗ್ಗೆ 4 ನೇ ಜೆ ಎಂ ಎಪ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಈ ಸಂದರ್ಭದಲ್ಲಿ ಪೋಲಿಸರು ಅಪರಾಧಿಗಳ ವಿರುದ್ಧ ಚಾಚ್ ರ್ಶೀಟ್ ಸಲ್ಲಿಸಲು ಅವಕಾಶ ಕೋರಿದ ಹಿನ್ನೆಲೆಯಲ್ಲಿ ಸರ್ಕಾರಿ ಅಭಿಯೋಜಕರು 2017 ರ ಜನವರಿ ಮಾಹೆಯಲ್ಲಿ ಚಾಚ್ ರ್ಶೀಟ್ ಸಿದ್ದಪಡಿಸುವಂತೆ ಪೋಲಿಸರಿಗೆ ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

 ಮಾರ್ಚ್‌ 13ರಂದು ಆರೆಸ್ಸೆಸ್‌ ಮುಖಂಡ ರಾಜುರನ್ನು ಉದಯಗಿರಿ ಠಾಣಾ ವ್ಯಾಪ್ತಿಯಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.  ಮೈಸೂರು ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು  ಬಂಧಿತರಿಂದ ಒಂದು ಕಾರು, ಬೈಕ್‌ ಹಾಗೂ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದರು ..  ಹುಣಸೂರಿನ ಅಮಿದ್‌ (35), ಉದಯಗಿರಿಯ ಹಮೀದ್‌ (36), ಮೈಸೂರಿನ ಶಾಂತಿನಗರದ ಜಾವೆದ್‌(40), ಅಹ್ಮದ್‌ (36) ಬಂಧಿತ ಆರೋಪಿಗಳಾಗಿರುತ್ತಾರೆ .ಮೂಲಭೂತವಾದಿ ಸಂಘಟನೆ ನಂಟು ಹೊಂದಿ ಈ ಹತ್ಯೆ ನಡೆಸಲಾಹಿಟ್ಟು ಎಂದು ಆರೋಪಿಗಳು ಒಪ್ಪಿ ಕೊಂಡಿದ್ದಾರೆ

No comments