ಹೆದ್ದಾರಿ ಅಕ್ಕ-ಪಕ್ಕದ ಮದ್ಯದಂಗಡಿಗೆ ಮುಂದಿನ ಎಪ್ರೀಲ್'ನಿಂದ ಬೀಗ.
ನವದೆಹಲಿ : ಹೆದ್ದಾರಿಗಳ ಅಕ್ಕ-ಪಕ್ಕದಲ್ಲಿರುವ ಮದ್ಯದಂಗಡಿಗಳಿಗೆ ಮುಂದಿನ ಎಪ್ರಿಲ್'ನಿಂದ ಬೀಗ ಬೀಳಲಿದೆ. ಸುಪ್ರೀಂಕೋರ್ಟ್ ಇಂದು ಹೊರಡಿಸಿದ ಆಜ್ಞೆ ಪ್ರಕಾರ ರಾಜ್ಯ ಹಾಗು ರಾಷ್ಟ್ರೀಯ ಹೆದ್ದಾರಿಗಳ ಅಕ್ಕ ಪಕ್ಕದಲ್ಲಿ ಮುಂದಿನ ಎಪ್ರೀಲ್'ನಿಂದ ಮದ್ಯದಂಗಡಿಗಳನ್ನು ತೆರಯುವಂತಿಲ್ಲ. ಈಗ ಇರುವ ಮದ್ಯದಂಗಡಿಗಳ ಪರವಾನಿಗೆ ನವೀಕರಣ ಮಾಡುವುದನ್ನು ತಡೆಹಿಡಿಯಲಾಗುವುದು.
ಮದ್ಯದಂಗಡಿಗಳು ಹೆದ್ದಾರಿಗಳಿಗಿಂತ ಕಡೆಯಪಕ್ಷ 500 ಮೀಟರ್ ಆದರು ದೂರದಲ್ಲಿರಬೇಕು. ಮದ್ಯದಂಗಡಿಗಳ ಬ್ಯಾನರ್ ಹಾಗೂ ಜಾಹೀರಾತುಗಳನ್ನು ಕೂಡ ತೆರವುಗೊಳಿಸುವಂತೆ ಕೋರ್ಟ್ ಆಜ್ಞೆ ಹೊರಡಿಸಿದೆ.
No comments