ಆಕ್ಸಿಸ್ ಬ್ಯಾಂಕ್'ನ ನೊಯ್ಡ ಶಾಖೆಯ ಮೇಲೆ ದಾಳಿ, 20 ನಕಲಿ ಖಾತೆಗಳಿಂದ 60 ಕೋಟಿ ವಶ.
ನೋಯ್ಡ : ಕಪ್ಪು ಹಣ ವಶಪಡಿಸಿಕೊಳ್ಳಲು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದೇಶದಾದ್ಯಂತ ಸರಣಿ ದಾಳಿಯನ್ನು ಮುಂದುವರೆಸಿದ್ದಾರೆ, ಇದಕ್ಕೆ ಇತ್ತೀಚಿನ ಬಲಿ ಆಕ್ಸಿಸ್ ಬ್ಯಾಂಕ್'ನ ನೋಯ್ಡಾ ಶಾಖೆ.
ಆಕ್ಸಿಸ್ ಬ್ಯಾಂಕ್'ನ ನೊಯ್ಡ ಶಾಖೆಯ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಅಧಿಕಾರಿಗಳು ಧಾಳಿ ನಡೆಸಿ 20 ನಕಲಿ ಖಾತೆಗಳಿಂದ ಒಟ್ಟು 60 ಕೋಟಿ ಹಣವನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ನೊಯ್ಡಾದ ಸೆಕ್ಟರ್ 51 ಬಳಿ ಇರುವ ಆಕ್ಸಿಸ್ ಬ್ಯಾಂಕಿನಲ್ಲಿ ಕಪ್ಪು ಹಣ ಸಂಗ್ರಹಿಸಲಿಕ್ಕಾಗಿಯೇ ಇಪ್ಪತ್ತು ನಕಲಿ ಖಾತೆಗಳನ್ನು ತೆರೆಯಲಾಗಿತ್ತು, ಈ ಇಪ್ಪತ್ತು ಖಾತೆಗಳಲ್ಲಿ 60 ಕೋಟಿಗೂ ಅಧಿಕ ಕಪ್ಪು ಹಣ ಕಂಡುಬಂದಿದೆ, ಈ ಹಣವನ್ನು ಆದಾಯ ತೆರಿಗೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
3.2 ಕೋಟಿ ರೂಪಾಯಿ ಹೊಸ ನೋಟಿನೊಂದಿಗೆ ಇಬ್ಬರು ಸಿಕ್ಕಿ ಬಿದ್ದ ಕಾರಣ ಕಳೆದ ನವೆಂಬರ್ 25 ರಂದು ದೆಹಲಿಯ ಕಾಶ್ಮೀರದ ಗೇಟ್ ಬಳಿಯ ಆಕ್ಸಿಸ್ ಬ್ಯಾಂಕ್ ಶಾಖೆಯ ಮೇಲು ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಆಕ್ಸಿಸ್ ಬ್ಯಾಂಕ್ ಇದುವರೆಗೆ 19 ಮಂದಿ ಬ್ಯಾಂಕ್ ಸಿಬ್ಬಂದಿಗಳನ್ನು ಕೆಲಸದಿಂದ ಅಮಾನತುಗೊಳಿಸಿದೆ ಇದರಲ್ಲಿ ಕಾಶ್ಮೀರ್ ಗೇಟ್ ಶಾಖೆಯ 6 ಸಿಬ್ಬಂದಿಗಳೂ ಸೇರಿದ್ದಾರೆ.
No comments