Breaking News

ಮಾಸ್ತಿಗುಡಿ ದುರಂತ ಕುಟುಂಬಕ್ಕೆ 5.25 ಲಕ್ಷ


ಬೆಂಗಳೂರು: ಮಾಸ್ತಿಗುಡಿ ದುರಂತದಲ್ಲಿ ಕೊನೆಯ ಹಂತದ ಚಿತ್ರೀಕರಣದ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಇಬ್ಬರು ಕಲಾವಿದರ ಕುಟುಂಬಕ್ಕೆ ತಲಾ 5.25 ಲಕ್ಷ ಸಹಾಯಧನವನ್ನು ವಿತರಣೆ ಮಾಡಲಾಯಿತು.ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಶುಕ್ರವಾರ, ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಅವರು ನೀಡಿದ 5 ಲಕ್ಷ ಹಾಗೂ ಜಾನ್ ಜಾನಿ ಜನಾರ್ಧನ್ ಸಿನಿಮಾ ನಿರ್ಮಾಪಕ ಪದ್ಮನಾಭ ಅವರು ನೀಡಿದ 25 ಸಾವಿರದ ಚೆಕ್‌ ಅನ್ನು ಉದಯ್‌ ತಂದೆ ವೆಂಕಟೇಶ್‌ ಮತ್ತು ಅನಿಲ್‌ ಸಹೋದರ ಶ್ರೀಕಾಂತ್‌ ಅವರಿಗೆ ನೀಡಿಲಾಯಿತು. ಹಣದ ಚೆಕ್‌ ಅನ್ನು ನಟ ಅಂಬರೀಷ್‌ ಹಸ್ತಾಂತರಿಸಿದರು.

No comments