Breaking News

ನೋಟು ನಿಶೇಧದ ನಂತರ ಅಮಿತ್ ಶಾ ನಿರ್ದೇಶಕರಾಗಿರುವ ಸಹಕಾರಿ ಬ್ಯಾಂಕಿನಲ್ಲಿ 500 ಕೋಟಿ ಜಮಾವಣೆ.

ಅಹ್ಮದಾಬಾದ್ : ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನಿರ್ದೇಶಕರಾಗಿರುವ ಅಹ್ಮದಾಬಾದಿನ ಸಹಕಾರಿ ಬ್ಯಾಂಕ್‌ನಲ್ಲಿ 500 ಕೋಟಿಗೂ ಅಧಿಕ ಕಪ್ಪುಹಣ ಬಿಳಿ ಮಾಡಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.
ಕೇಂದ್ರ ಸರ್ಕಾರ 500 ಹಾಗೂ 1000 ಮುಖಬೆಲೆಯ ನೋಟುಗಳನ್ನು ನಿಶೇಧ ಮಾಡಿದ ಕೆಲವೇ ದಿನಗಳಲ್ಲಿ 500 ಕೋಟಿಗೂ ಅಧಿಕ ಹಣವನ್ನು ಅಹ್ಮದಾಬಾದಿನ ಆಶ್ರಮಮ್ ರಸ್ತೆಯಲ್ಲಿರುವ ಸಹಕಾರಿ ಬ್ಯಾಂಕಿನ ಶಾಖೆಯಲ್ಲಿ ಜಮಾವಣೆಯಾಗಿದೆ.
ಅಮಿತ್ ಶಾ ನಿರ್ದೇಶಕರಾಗಿರುವ ಸಹಕಾರಿ ಬ್ಯಾಂಕಿಗೆ 190 ಶಾಖೆಗಳಿದ್ದು ಭಾರೀ ಮೊತ್ತದ ಹಣ ಜಮಾವಣೆಯಾಗಿರುವ ಶಾಖೆ ಸಹಕಾರಿ ಬ್ಯಾಕಿನ ಮುಖ್ಯ ಶಾಖೆಯಾಗಿದೆ. ಈ ಸಹಕಾರಿ ಬ್ಯಾಂಕಿನಲ್ಲಿ ಸಣ್ಣ ಉದ್ದಿಮೆಗಾರರು, ರೈತರು ಖಾತೆಗಳನ್ನು ಹೊಂದಿದ್ದು ಇಷ್ಟು ಮೊತ್ತದ ಹಣ ಹೇಗೆ ಜಮಾವಣೆಯಾಯಿತು ಎಂಬ ಬಗ್ಗೆ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆಯನ್ನು ನಡೆಸುತ್ತಿದ್ದಾರೆ.
ಗುಜರಾತಿನಲ್ಲಿ 18 ಸಹಕಾರಿ ಬ್ಯಾಂಕ್ ಗಳಿದ್ದು ಇದರಲ್ಲಿ 17 ಬ್ಯಾಂಕ್ ಗಳು ಬಿಜೆಪಿಯ ಅಧೀನದಲ್ಲಿದೆ. ಬಿಜೆಪಿ ತಮ್ಮ ಅಧೀನದಲ್ಲಿರುವ ಸಹಕಾರಿ ಬ್ಯಾಂಕ್ ಗಳ ಮೂಲಕ ಕಪ್ಪು ಹಣವನ್ನು ಬಿಳಿಯನ್ನಾಗಿಸುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.ಈ ಬಗ್ಗೆ ಬ್ಯಾಂಕಿನ ಸಿಸಿಟಿವಿ ದಾಖಲೆಯನ್ನು ಆದಾಯ ತೆರಿಗೆ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಗುಜರಾತಿನಲ್ಲಿರುವ ಉಳಿದ ಸಹಕಾರಿ ಬ್ಯಾಂಕ್'ಗಳಲ್ಲಿಯೂ ಕಪ್ಪು ಹಣ ಜಮಾವಣೆಯಾಗಿರಬಹುದು ಎಂಬ ಗಂಭೀರ ಆರೋಪ ಕೇಳಿ ಬಂದಿದ್ದು ತನಿಖೆ ನಡೆಯುತ್ತಿದೆ.

No comments