Breaking News

ಅಮೇರಿಕಾದಿಂದಲೇ ಧಾರವಾಡದಲ್ಲಿರುವ ಪತ್ನಿಗೆ ತಲಾಖ್ ಹೇಳಿದ ಪತಿರಾಯ.

ಧಾರವಾಡ : ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಏಕರೂಪ ನಾಗರೀಕ ಸಂಹಿತೆ ಬಗ್ಗೆ ದೇಶಾದ್ಯಂತ ಸಾಕಷ್ಟು ಪರ ವಿರೋಧ ಚರ್ಚೆಗಳು ನಡೆಯುತ್ತಿದ್ದರೆ ಇಲ್ಲೊಬ್ಬ ಪತಿ ತನ್ನ ಪತ್ನಿಗೆ ವಿದೇಶದಿಂದಲೇ ತಲಾಖ್ ಹೇಳಿದ ಪ್ರಕರಣ ಬೆಳಕಿಗೆ ಬಂದಿದೆ.
ಧಾರವಾಡ ಜಿಲ್ಲೆಯ ಕೊಪ್ಪದಕೆರೆ ನಿವಾಸಿ ಅಮೇರಿಕದಲ್ಲಿ ಕೆಲಸ ಮಾಡುತ್ತಿರುವ ಗುಲ್'ಝಾರ್ ಎಂಬಾತನೆ ಅಮೇರಿಕಾದಿಂದಲೇ ತನ್ನ ಪತ್ನಿಗೆ ತಲಾಖ್ ಪತ್ರ ಕಳುಹಿಸಿದಾತ. 2011 ರಲ್ಲಿ ಗುಲ್'ಝಾರ್ ಮದರಾಮಡ್ಡಿ ಗ್ರಾಮದ ಯುವತಿ ಮುಫ್ರಿನ ತಾಜ್ ಜೊತೆ ಮದುವೆಯಾಗಿದ್ದ . ಮದುವೆಯಾದ ಒಂದುವರೆ ವರ್ಷದ ನಂತರ ಅಮೇರಿಕಕ್ಕೆ ತೆರಳಿದ ಗುಲ್'ಝಾರ್ ಅಲ್ಲೇ ನೆಲೆಸಿದ್ದ.
ಈ ಬಗ್ಗೆ ಮಾತನಾಡಿದ ಸಂತ್ರಸ್ಥ ಯುವತಿ ಮುಫ್ರೀನ ತಾಜ್ " ನನ್ನ ಪತಿ ಅಮೇರಿಕಾಗೆ ತೆರಳಿದ ನಂತರ ಕೇವಲ ಮೂರು ಬಾರಿ ಕರೆ ಮಾಡಿ ನನ್ನೊಂದಿಗೆ ಮಾತನಾಡಿದ್ದಾರೆ, ಈಗ ಅಮೇರಿಕಾದಿಂದಲೇ ಪತ್ರದ ಮೂಲಕ ತಲಾಖ್ ಹೇಳಿದ್ದಾರೆ. ಈ ಬಗ್ಗೆ ಪತಿ ನನ್ನ ಬಳಿ ಏನೂ ಹೇಳಿಲ್ಲ. ಈ ತಲಾಖ್ ಅಸಿಂಧುಗೊಳಿಸುವಂತೆ ಕೌಟುಂಬಿಕ ನ್ಯಾಯಾಲಯದಲ್ಲಿ ದೂರು ನೀಡಿದ್ದೇನೆ" ಎಂದಿದ್ದಾಳೆ. 
ಮುಫ್ರೀನ ತಾಜ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯ, ಗುಲ್'ಝಾರ್ ನ್ಯಾಯಾಲಯಕ್ಕೆ ಹಾಜರಾಗದೆ ಇರುವುದರಿಂದ ಆತನ ಹೇಳಿಕೆಯನ್ನು ಅಮೇರಿಕಾದಿಂದಲೇ ವೀಡಿಯೋ ಕಾನ್ಫರೆನ್ಸ್ ಮೂಲಕ ಪಡೆಯಲು ಕೋರ್ಟ್ ಕಮೀಷನರನ್ನು ನೇಮಿಸಿದೆ

No comments