ಉಳ್ಳಾಲ - ಅನೈತಿಕ ಚಟುವಟಿಕೆ ಶಂಕೆ, ಪೋಲೀಸರನ್ನು ಕರೆಸಿದ ಸ್ಥಳೀಯರು.
ಮಂಗಳೂರು : ಮಂಗಳೂರಿನ ಉಳ್ಳಾಲದ ಬಾಡಿಗೆ ಮನೆಯೊಂದರಲ್ಲಿ ಅವಿವಾಹಿತ ಜೋಡಿಗಳು ಇರುವುದನ್ನು ಪತ್ತೆಹಚ್ಚಿದ ಸ್ಥಳೀಯರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರ ಮಾಹಿತಿಯನ್ವಯ ಉಳ್ಳಾಲ ಪೋಲೀಸರು ಜೋಡಿಯಿದ್ದ ಮನೆಗೆ ದಾಳಿ ನಡೆಸಿದ್ದಾರೆ.
ಕಾಶ್ಮೀರ ಮೂಲದ ವೈದ್ಯಕೀಯ ವಿದ್ಯಾರ್ಥಿ ಉಳ್ಳಾಲದ ಬಗಂಬಿಲ ಸಮೀಪ ಮನೆಯೊಂದನ್ನು ಬಾಡಿಗೆ ಪಡೆದು ವಾಸಿಸುತ್ತಿದ್ದ. ದಿನಾ ಮಧ್ಯಾಹ್ನ ಹುಡುಗಿಯೊಬ್ಬಳನ್ನು ತನ್ನ ಬಾಡಿಗೆ ಮನೆಗೆ ಕರೆದುಕೊಂಡು ಬರುತ್ತಿದ್ದ . ಇದನ್ನು ಗಮನಿಸಿದ್ದ ಸ್ಥಳಿಯರು ಸ್ಥಳೀಯ ಹಿಂದೂಪರ ಸಂಘಟನೆಗಳಿಗೆ ಮಾಹಿತಿ ನೀಡಿದ್ದರು.
ಮಾಹಿತಿ ಪಡೆದ ಹಿಂದೂಪರ ಸಂಘಟನೆ ಕಾರ್ಯಕರ್ತರು ಜೊತೆಗೆ ಸ್ಥಳಿಯರು ಜೋಡಿಯಿದ್ದ ಮನೆಮುಂದೆ ಜಮಾಯಿಸಿ ಉಳ್ಳಾಲ ಪೋಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೋಲೀಸರು ಮನೆಯಲ್ಲಿದ್ದ ಜೋಡಿಯನ್ನು ವಿಚಾರಣೆಗೆ ಒಳಪಡಿಸಿದಾಗ, ಇಬ್ಬರಿಗೆ ವಿವಾಹ ನಿಶ್ಚಯವಾಗಿರುವ ಬಗ್ಗೆ ಗೊತ್ತಾಗಿದೆ.
ಯುವಕ ಕಾಶ್ಮೀರ ಮೂಲದ ಮುಸ್ಲಿಂ ಧರ್ಮಕ್ಕೆ ಸೇರಿದ ವಿದ್ಯಾರ್ಥಿಯಾಗಿದ್ದರೆ, ಯುವತಿ ಕೇರಳ ಮೂಲದವಳಾಗಿದ್ದು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವಳಾಗಿದ್ದಾಳೆ. ಇಬ್ಬರಿಗೆ ವಿವಾಹ ನಿಶ್ಚಿತಾರ್ಥವಾಗಿರುವ ದಾಖಲೆಗಳನ್ನು ತೋರಿಸಿದ್ದಾರೆ ಎಂದು ಪೋಲೀಸರು ಹೇಳಿದರು.

No comments