Breaking News

ವೀಡಿಯೋ - ಹೆದರಬೇಡಿ, ಇನ್ನು ಭೂಕಂಪನವಾಗುವ ಯಾವುದೇ ಭಯವಿಲ್ಲ, ರಾಹುಲ್ ಗಾಂಧಿಗೆ ಮೋದಿ ಟಾಂಗ್.


​​
ವಾರಣಾಸಿ : ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ "ಭೂಕಂಪ" ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ವಾರಣಾಸಿಯಲ್ಲಿ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ.
ರಾಹುಲ್ ಗಾಂಧಿ ಬುಧವಾರ ಗುಜರಾತಿನ ಮೆಹಸಾನಾದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ "ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಹರಾ ಸಮೂಹ ಸಂಸ್ಥೆಗಳಿಂದ ಲಂಚ ಸ್ವೀಕರಿಸಿದ್ದಾರೆ" ಎಂದು ಹೇಳಿಕೆ ನೀಡಿದ್ದರು.
ಇಂದು ವಾರಣಾಸಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ ಉದ್ಘಾಟಸುತ್ತಾ ಮಾತನಾಡಿದ ನರೇಂದ್ರ ಮೋದಿಯವರು "ಅವರಲ್ಲಿ ಯುವ ನಾಯಕನಿದ್ದಾನೆ, ಆತ ಇನ್ನೂ ಮಾತನಾಡಲು ಕಲಿಯುತ್ತಿದ್ದಾನೆ.ಆತ ಯಾವಾಗ ಮಾತನಾಡಲು ಕಲಿಯಲು ಪ್ರಾರಂಭಿಸಿದನೋ, ನನಗೆ ತುಂಬಾ ಸಂತೋಷವಾಗಿದೆ. 2009ರಲ್ಲಿ ಆತನಲ್ಲಿ ಏನೇನು ಇದೆ ಎಂಬ ಬಗ್ಗೆ ನಮಗೆ ಊಹಿಸಲು ಆಗುತ್ತಿರಲಿಲ್ಲ. ಆದರೆ ಈಗ ನಮಗೆ ಗೊತ್ತಾಗುತ್ತಿದೆ. ನಿನ್ನೆ ಆತ ಏನಾದರೂ ಮಾತನಾಡದೆ ಇರುತ್ತಿದ್ದರೆ ಭೂಕಂಪನವಾಗುವ ಭಯವಿತ್ತು, ಅದು ಎಂತಹಾ ಭೂಕಂಪನವೆಂದರೆ ಅದರ ತೀವ್ರತೆಯನ್ನು ಜನರು ಮುಂದಿನ ಹತ್ತು ವರ್ಷದವರೆಗೆ ಎದುರಿಸಬೇಕಾಗಿತ್ತು. ದೇವರ ದಯೆ ಕೊನೆಗೂ ಆತ ಮಾತನಾಡಲು ಶುರು ಮಾಡಿದ್ದಾನೆ, ಭೂಕಂಪದ ಯಾವುದೇ ಭಯವಿಲ್ಲ" ಎಂದು ರಾಹುಲ್ ಗಾಂಧಿಯ ಹೆಸರನ್ನು ಎಲ್ಲೂ ಪ್ರಸ್ತಾಪ ಮಾಡದೆ ತಿರುಗೇಟು ನೀಡಿದ್ದಾರೆ. 

ರಾಹುಲ್ ಗಾಂಧಿ ಪ್ರಧಾನಿ ಮೇಲೆ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿ "ಇದೇ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಹೊಂದಿರುವ ಭೂಕಂಪ ಉಂಟು ಮಾಡುವ ಆರೋಪವೇ..??? ಹಾಗಾದರೆ ಇದರ ಬಗ್ಗೆ ಈಗಾಗಲೇ ಕೇಸು ದಾಖಲಾಗಿದೆ, ಸುಪ್ರೀಂ ಕೋರ್ಟ್ ನರೇಂದ್ರ ಮೋದಿ ಸಹರಾ ಸಂಸ್ಥೆಯಿಂದ ಲಂಚ ಪಡೆದ ಬಗ್ಗೆ ಯಾವುದೇ ಸಾಕ್ಷ್ಯಗಳು, ಆಧಾರಗಳು ಇಲ್ಲ ಎಂದು  ಹೇಳಿದೆ. ಮತ್ತೆ ಅದನ್ನೇ ಕೆದಕುವ ಮೂಲಕ ರಾಹುಲ್ ಗಾಂಧಿ ಸುಪ್ರೀಕೋರ್ಟ್ ತೀರ್ಪಿಗೆ ಅವಮಾನ ಮಾಡಿದ್ದಾರೆ" ಎಂದಿದೆ

No comments