ರೌಡಿ ಶೀಟರ್ ಪ್ರದೀಪ್ ಮೆಂಡನ್ ಬಂಧನ
ಮಂಗಳೂರು : ಉಡುಪಿಯ ಕುಖ್ಯಾತ ಕ್ರಿಮಿನಲ್ ಪ್ರದೀಪ್ ಮೆಂಡನ್ (46) ಅನ್ನು ಬುಧವಾರ, ಡಿಸೆಂಬರ್ 22 ರಂದು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಪ್ರದೀಪ್ ಮೆಂಡನ್ ಮೂಲತಃ ಅಂಬಲ್ಪಾಡಿ ನಿವಾಸಿಯಾಗಿದ್ದು ,ಪೊಲೀಸ್ ದಾಖಲೆಗಳ ಪ್ರಕಾರ ಕೊಲೆ ,ಕೊಲೆ ಯತ್ನ ಮತ್ತು ಅಕ್ರಮ ಶಸ್ತಾಸ್ತ್ರ ಕಾಯ್ದೆ ಸೇರಿದಂತೆ ಹಲವು ಪ್ರಕರಣಗಳು ಆರೋಪಿಯ ಮೇಲೆ ಇದೆ .ಕೆಲವು ತಿಂಗಳ ಹಿಂದೆ ಪ್ರಕರಣ ಒಂದಕ್ಕೆ ಸಂಬಂಧಿಸಿ ಜಾಮೀನು ಪಡೆದು ಹೊರ ಬಂದಿದ್ದ ನಂತರ ನ್ಯಾಯಾಲಯದ ವಿಚಾರಣೆಯಲ್ಲಿ ಭಾಗವಹಿಸದೇ ತಲೆ ಮರೆಸಿಕೊಂಡಿದ್ದ .ಪೊಲೀಸ್ ಮೂಲಗಳ ಪ್ರಕಾರ ನಕಲಿ ಸಿಮ್ ಕಾರ್ಡ್ ಮೂಲಕ ಈತ ಕಾರ್ಯಾಚರಿಸುತಿದ್ದ ನಗರದ ಕದ್ರಿ ಪಾರ್ಕ್ ಬಳಿ ಒಂದು ಮನೆಯಲ್ಲಿ ವಾಸವಿರುವ ಮಾಹಿತಿ ಪಡೆದ ಪೊಲೀಸರು ಪ್ರದೀಪ್ ಮೆಂಡನ್ ಅನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ ಮತ್ತು ಬೇರೆಯವರಿಗೆ ಸೇರಿದ SIM ಕಾರ್ಡ್ ಬಳಕೆ ಕುರಿತಾಗಿ ಪ್ರಕರಣ ಕೂಡ ದಾಖಲಿಸಲಾಗಿದೆ ಎಂದು ಹೇಳಲಾಗಿದೆ .
ಕಾರ್ಯಾಚರಣೆಯಲ್ಲಿ ಸಿಸಿಬಿ ಇನ್ಸ್ಪೆಕ್ಟರ್ ಸುನಿಲ್ ವೈ ನಾಯಕ್, ಸರ್ಕಲ್ ಇನ್ಸ್ಪೆಕ್ಟರ್ ಶ್ಯಾಮ್ ಸುಂದರ್ ಮತ್ತು ಸಿಸಿಬಿ ಇತರ ಸಿಬ್ಬಂದಿಗಳು ಭಾಗವಹಿಸಿದ್ದರು.
No comments