ಟಿಫನ್ ಬಾಕ್ಸ್‍ನಲ್ಲಿ ಬಾಂಬ್ ಯಾಸೀನ್ ಭಟ್ಕಳ್ ಸೇರಿ 6 ಮಂದಿ ಅಪರಾಧಿಗಳು
ಆಂಧ್ರಪ್ರದೇಶ : ಟಿಫನ್ ಬಾಕ್ಸ್‍ನಲ್ಲಿ ಬಾಂಬ್ ಇಟ್ಟು, 19 ಜನರ ಸಾವಿಗೆ ಕಾರಣವಾದ ದಿಲ್‍ಸುಖ್‍ನಗರ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರು ಆರೋಪಿಗಳನ್ನು ಅಪರಾಧಿಗಳೆಂದು ಇಲ್ಲಿನ ನ್ಯಾಯಾಲಯವೊಂದು ಮಹತ್ವದ ತೀರ್ಪು ನೀಡಿದೆ. ಉಗ್ರಗಾಮಿಗಳಾದ ರಿಯಾಜ್ ಭಟ್ಕಳ್, ಅಸಾದುಲ್ಲಾ ಅಕ್ತರ್, ಇಜಾಜ್, ಯಾಸೀನ್ ಭಟ್ಕಳ್, ಸಹಸೀನ್ ಅಕ್ತರ್ ಅಲಿಯಾಸ್ ಮೊಗು ಮತ್ತು ಏಸಾನ್ ಇವರುಗಳನ್ನು ಎನ್‍ಐಎ ವಿಶೇಷ ನ್ಯಾಯಾಲಯ ಅಪರಾಧಿಗಳೆಂದು ತೀರ್ಪು ನೀಡಿದ್ದು, ಡಿಸೆಂಬರ್ 19 ರಂದು ಶಿಕ್ಷೆ ಪ್ರಮಾಣವನ್ನು ತಿಳಿಸಿದೆ.ಈ ಆರೋಪಿಗಳು 21ನೆ ಫೆಬ್ರವರಿ 2013ರಲ್ಲಿ ಹೈದರಾಬಾದ್‍ನ ಅತ್ಯಂತ ಜನನಿಬಿಡ ಪ್ರದೇಶವಾದ ದಿಲ್‍ಸುಖ್‍ನಗರದಲ್ಲಿ ಟಿಫನ್ ಬಾಕ್ಸ್‍ನಲ್ಲಿ ಬಾಂಬ್ ಇಟ್ಟು ಸ್ಫೋಟಿಸಿದ್ದರು.
No comments